ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭುವನೇಶ್ವರಕ್ಕೆ ವಿಶೇಷ ರೈಲು

Published : 8 ಸೆಪ್ಟೆಂಬರ್ 2024, 16:23 IST
Last Updated : 8 ಸೆಪ್ಟೆಂಬರ್ 2024, 16:23 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ದಸರಾ, ದೀಪಾವಳಿ ಹಬ್ಬದ ಅಂಗವಾಗಿ ಒಡಿಶಾ ರಾಜಧಾನಿ ಭುವನೇಶ್ವರ ಮತ್ತು ಬೆಳಗಾವಿ ನಡುವೆ ಹೊಸಪೇಟೆ ಮಾರ್ಗವಾಗಿ ವಾರಕ್ಕೊಮ್ಮೆ ವಿಶೇಷ ರೈಲು ಸಂಚಾರ ಸೌಲಭ್ಯವನ್ನು ಸೆಪ್ಟೆಂಬರ್‌ 9ರಿಂದ ಡಿಸೆಂಬರ್ 2ರವರೆಗೆ ಕಲ್ಪಿಸಲಾಗಿದೆ.

02813 ಸಂಖ್ಯೆ ರೈಲು ಪ್ರತಿ ಶನಿವಾರ ಭುವನೇಶ್ವರದಿಂದ ಸಂಜೆ 7.15ಕ್ಕೆ ಹೊರಟು ದುವ್ವಾಡ (ವಿಶಾಖಪಟ್ಟಣ), ರಾಜಮಂಡ್ರಿ, ವಿಜಯವಾಡ, ಡೋನ್, ಗುಂತಕಲ್, ಬಳ್ಳಾರಿ ಮಾರ್ಗವಾಗಿ ಭಾನುವಾರ ರಾತ್ರಿ 7.50ಕ್ಕೆ ಹೊಸಪೇಟೆಗೆ ಬಂದು, ಗದಗ, ಹುಬ್ಬಳ್ಳಿ, ಧಾರವಾಡ ಮಾರ್ಗವಾಗಿ ಬೆಳಗಾವಿಗೆ ಸೋಮವಾರ ಮುಂಜಾನೆ 3ಕ್ಕೆ ತಲುಪುತ್ತದೆ.

02814 ಸಂಖ್ಯೆಯ ರೈಲು ಪ್ರತಿ ಸೋಮವಾರ ಬೆಳಿಗ್ಗೆ 7.30ಕ್ಕೆ ಬೆಳಗಾವಿಯಿಂದ ನಿರ್ಗಮಿಸಿ ಮಧ್ಯಾಹ್ನ 12.30ಕ್ಕೆ ಹೊಸಪೇಟೆ ಬಂದು, ಮಂಗಳವಾರ ಮಧ್ಯಾಹ್ನ 2.30ಕ್ಕೆ ಭುವನೇಶ್ವರ ತಲುಪುತ್ತದೆ ಎಂದು ವಿಜಯನಗರ ರೈಲ್ವೆ ಕ್ರಿಯಾ ಸಮಿತಿ ಕಾರ್ಯದರ್ಶಿ ಮಹೇಶ ಕುಡುತಿನಿ ಮತ್ತು ಜಿ.ಉಮಾಮಹೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT