ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಸ್ವಂತ ಖರ್ಚಿನಲ್ಲಿ ಡೆಸ್ಕ್‌ ವ್ಯವಸ್ಥೆ

2 ವರ್ಷಗಳಿಂದ ಸಮಸ್ಯೆ ಇದ್ದರೂ ಸರಿಪಡಿಸದ ಶಿಕ್ಷಣ ಇಲಾಖೆ
Last Updated 30 ಮಾರ್ಚ್ 2023, 19:18 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಉಪನಾಯಕನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವಾಗಿ ಗುರುತಿಸಲಾಗಿದೆ. ಆದರೆ, ಅಲ್ಲಿ ಪರೀಕ್ಷೆ ಬರೆಯಲು ಡೆಸ್ಕ್‌ಗಳಿಲ್ಲದ ಕಾರಣ ಆರು ಶಾಲೆಗಳ ಮುಖ್ಯ ಶಿಕ್ಷಕರೇ ಖರ್ಚು ಭರಿಸಿ ಅದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ತಾಲ್ಲೂಕಿನ ಪಿಂಜಾರ್ ಹೆಗ್ಡಾಳ್ ಪ್ರೌಢಶಾಲೆಯ 52, ಹಂಪಾಪಟ್ಟಣದ 75, ಅಂಕಸಮುದ್ರದ 29, ಮಗಿಮಾವಿನಹಳ್ಳಿಯ 58 , ನಾರಾಯಣದೇವರಕೆರೆಯ 34 ಹಾಗೂ ಉಪನಾಯಕನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ 71 ಹಾಗೂ ಮೊರಾರ್ಜಿ ವಸತಿ ಶಾಲೆಯ 48 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದೆ.

ಒಟ್ಟು 367 ವಿದ್ಯಾರ್ಥಿಗಳಿಗೆ ಕೇಂದ್ರದಲ್ಲಿ ಅಗತ್ಯ ಸಂಖ್ಯೆಯ ಡೆಸ್ಕ್‌ಗಳು ಇರದ ಕಾರಣ ಆಯಾ ಶಾಲೆಗಳ ಮುಖ್ಯ ಶಿಕ್ಷಕರೇ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಳೆದೆರಡು ದಿನಗಳಿಂದ ಟ್ರ್ಯಾಕ್ಟರ್‌ಗಳಲ್ಲಿ ಡೆಸ್ಕ್‌ಗಳನ್ನು ತರಿಸಿಕೊಂಡಿದ್ದಾರೆ. ಡೆಸ್ಕ್‌ಗಳ ಸಾಗಣೆ ವೆಚ್ಚ ಅವರೇ ಭರಿಸಬೇಕಾಗಿದೆ. ಎರಡು ವರ್ಷಗಳಿಂದ ಇದೇ ರೀತಿ ನಡೆಯುತ್ತಿದೆ. ಆದರೆ, ಇಲಾಖೆ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.

‘ಟ್ರ್ಯಾಕ್ಟರ್ ಬಾಡಿಗೆ, ಕಾರ್ಮಿಕರ ಖರ್ಚು ಸೇರಿದರೆ ಸುಮಾರು ₹5 ಸಾವಿರಕ್ಕೂ ಹೆಚ್ಚು ಖರ್ಚು ಬರುತ್ತದೆ. ಶಾಲೆಯ ಮುಖ್ಯ ಶಿಕ್ಷಕರೇ ಭರಿಸಬೇಕಿದೆ. ಇದು ಸಂಬಂಧಿಸಿದ ಇಲಾಖೆಯ ಜವಾಬ್ದಾರಿ ಅಲ್ಲವೇ’ ಎಂದು ಹೆಸರು ಹೇಳಲಿಚ್ಛಿಸದ ಶಾಲೆಯೊಂದರ ಮುಖ್ಯಶಿಕ್ಷಕರು ಪ್ರಶ್ನಿಸಿದರು.

ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಆನಂದ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಪರೀಕ್ಷೆಗೆ ಹೊಸ ಕೇಂದ್ರ ಆಗಿರುವುದರಿಂದ ಆಸನಗಳ ಕೊರತೆ ಇದೆ. ವಿವಿಧ ಗ್ರಾಮಗಳ ಪ್ರೌಢ ಶಾಲೆಗಳಿಂದ ಡೆಸ್ಕ್‌ಗಳನ್ನು ತರಿಸಲಾಗಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT