ಹೊಸಪೇಟೆ (ವಿಜಯನಗರ): ‘ತುಂಗಭದ್ರಾ ಅಣೆಕಟ್ಟೆಯ 18ನೇ ಕ್ರೆಸ್ಟ್ಗೇಟ್ ಅಳವಡಿಕೆ ಕೆಲಸ ಡಿಸೆಂಬರ್ 24ರಂದು ಆರಂಭ ಆಗಲಿದೆ. ತಿಂಗಳಿಗೆ 8 ಗೇಟ್ ಅಳವಡಿಸುವ ಗುರಿಯಿದೆ’ ಎಂದು ತುಂಗಭದ್ರಾ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಚಂದ್ರಶೇಖರ್ ಹೇಳಿದರು.

‘ಇದುವರೆಗೂ ಹಳೆಯ ನಾಲ್ಕು ಗೇಟ್ಗಳನ್ನು ಅರ್ಧ ಭಾಗದಷ್ಟು ಕತ್ತರಿಸಿ ತೆಗೆಯಲಾಗಿದೆ. ನೀರು ಕ್ರೆಸ್ಟ್ ಮಟ್ಟಕ್ಕೆ ಕುಸಿದಂತೆ ಹಳೆಯ ಎಲ್ಲಾ 28 ಗೇಟ್ ತೆರವು ಮಾಡಲಾಗುವುದು. ಮೊದಲಿಗೆ 18ನೇ ಗೇಟ್ ಸ್ಥಳದಲ್ಲಿ ಹೊಸ ಗೇಟ್ ಅಳವಡಿಕೆ ಆಗಲಿದೆ. ಜೂನ್ ತಿಂಗಳಿಗೂ ಮುಂಚೆಯೇ ಎಲ್ಲ 33 ಗೇಟ್ ಅಳವಡಿಸಲಾಗುತ್ತದೆ’ ಎಂದರು.

‘ಪ್ರತಿ ಗೇಟ್ನಲ್ಲಿ 12 ಬಿಡಿಭಾಗಗಳಿರಲಿವೆ. ಅವುಗಳನ್ನು ಪ್ರತ್ಯೇಕವಾಗಿ ತಂದು ಜೋಡಿಸಲಾಗುವುದು. ಹೀಗಾಗಿ ಅಣೆಕಟ್ಟೆಯ ಮೇಲೆ ಅಧಿಕ ಭಾರ ಬೀಳುವುದಿಲ್ಲ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.