ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಿಬೊಮ್ಮನಹಳ್ಳಿ‌: ನಕಲಿ ಪ್ರಮಾಣ ಪತ್ರದಿಂದ ಮುಂಬಡ್ತಿ, ಯೋಜನಾಧಿಕಾರಿ ಬಂಧನ

Last Updated 14 ಸೆಪ್ಟೆಂಬರ್ 2022, 4:09 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ‌ (ವಿಜಯನಗರ ಜಿಲ್ಲೆ): ಪದವಿ ನಕಲಿ ಅಂಕಪಟ್ಟಿ ಮತ್ತು ಮೈಗ್ರೇಶನ್ ಪ್ರಮಾಣ ಪತ್ರಗಳನ್ನು ನೀಡಿ ಮುಂಬಡ್ತಿ ಪಡೆದಿದ್ದ ಇಲ್ಲಿನ ತಾಲ್ಲೂಕು ಪಂಚಾಯ್ತಿಯ ತಾಲ್ಲೂಕು ಯೋಜನಾಧಿಕಾರಿ ಉಮೇಶ್‍ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶೈಲಾ ಎಸ್. ಕುಲಕರ್ಣಿ ಅವರು ಮಂಗಳವಾರ ಪಟ್ಟಣ ಠಾಣೆಗೆ ದೂರು ಕೊಟ್ಟಿದ್ದರು. ದೂರು ಆಧರಿಸಿ ಪೊಲೀಸರು ಕ್ರಮ ಜರುಗಿಸಿದ್ದಾರೆ.

ಅನುಕಂಪ ಆಧಾರದಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಯಾಗಿ ಕೆಲಸ ಪಡೆದ ಉಮೇಶ್ ಗೌಡ ಮುಂಬಡ್ತಿಗಾಗಿ 2007, 2008, 2009ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮಾನಸ ಗಂಗೋತ್ರಿ, ಮೈಸೂರು ಹೆಸರಿನಲ್ಲಿ ಪದವಿಯ ನಕಲಿ ಅಂಕಪಟ್ಟಿಗಳು, ಪಾಸಿಂಗ್ ಸರ್ಟೀಫಿಕೆಟ್ ಹಾಗೂ ನಕಲಿ ಮೈಗ್ರೇಶನ್ ಪ್ರಮಾಣ ಪತ್ರಗಳನ್ನು ಸೃಷ್ಟಿಸಿಕೊಂಡು ಸರ್ಕಾರಕ್ಕೆ ಸಲ್ಲಿಸಿ ತಾಲ್ಲೂಕು ಯೋಜನಾಧಿಕಾರಿಯಾಗಿ ಹುದ್ದೆಗೆ ಮುಂಬಡ್ತಿ ಪಡೆದು ಇಲ್ಲಿನ ತಾಲ್ಲೂಕು ಪಂಚಾಯ್ತಿಯಲ್ಲಿ ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT