ಗುರುವಾರ , ಆಗಸ್ಟ್ 18, 2022
25 °C

ಹೊಸಪೇಟೆಯಲ್ಲಿ ಬಿರುಸಿನ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ಬಿರುಸಿನ ಮಳೆಯಾಗಿದೆ.

ಮಧ್ಯಾಹ್ನ ಎರಡೂವರೆ ಗಂಟೆಗೆ ಆರಂಭವಾದ ಮಳೆ ಆರು ಗಂಟೆಯ ವರೆಗೆ ಎಡೆಬಿಡದೆ ಸುರಿಯಿತು. ಬಿರುಸಿನ ಮಳೆಗೆ ನಗರದ ಬಸವೇಶ್ವರ ಬಡಾವಣೆಯಲ್ಲಿ ಇತ್ತೀಚೆಗೆ ನಿರ್ಮಿಸಿದ ಚರಂಡಿಗೆ ಹಾನಿಯಾಗಿದೆ. 

ಇದನ್ನೂ ಓದಿ: 

ತ್ಯಾಜ್ಯದ ನೀರೆಲ್ಲಾ ರಸ್ತೆ ಮೇಲೆ ಆವರಿಸಿಕೊಂಡು ಎಲ್ಲೆಡೆ ದುರ್ಗಂಧ ಹರಡಿತು. ನಗರದ ಹಂಪಿ ರಸ್ತೆ, ಚಿತ್ತವಾಡ್ಗಿ, ಬಳ್ಳಾರಿ ರಸ್ತೆಯಲ್ಲಿ ಅಪಾರ ನೀರು ಸಂಗ್ರಹಗೊಂಡಿತು. ಮಳೆ ನಿಲ್ಲುವವರೆಗೆ ಬಹುತೇಕ ರಸ್ತೆಗಳಲ್ಲಿ ಜನರ ಓಡಾಟ ತಗ್ಗಿತು.

ತಾಲ್ಲೂಕಿನ ಹಂಪಿ, ಕಮಲಾಪುರ, ಹೊಸೂರು, ನಾಗೇನಹಳ್ಳಿ,ಧರ್ಮದಗುಡ್ಡ, ಇಂಗಳಗಿ ಸೇರಿದಂತೆ ಹಲವೆಡೆ ಮಳೆಯಾಗಿದೆ. 

ಕಳೆದ ಒಂದು ತಿಂಗಳಿಂದ ಮಳೆಯಾಗಿರಲಿಲ್ಲ. ಬಿತ್ತನೆ ಮಾಡಿದವರು ಆತಂಕಕ್ಕೆ ಒಳಗಾಗಿದ್ದರು. ಆದರೆ, ಗುರುವಾರ ಸುರಿದ ಬಿರುಸಿನ ಮಳೆಗೆ ತಾಲ್ಲೂಕಿನ ರೈತರು ಸಂತಸಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು