ಭಾನುವಾರ, ಸೆಪ್ಟೆಂಬರ್ 25, 2022
20 °C

ವಿಜಯನಗರ | ಯುವತಿ ಕೊಲೆ ಪ್ರಕರಣ: ಆರೋಪಿಯ ಪೋಷಕರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನಹೊಸಹಳ್ಳಿ (ವಿಜಯನಗರ ಜಿಲ್ಲೆ): ಜುಲೈ 21 ರಂದು ಸಮೀಪದ ಕನ್ನಿ ಬೋರಯ್ಯನಹಟ್ಟಿಯಲ್ಲಿ ನಡೆದಿದ್ದ ನಿರ್ಮಲಾ ಎಂಬ ಯುವತಿಯ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಮತ್ತೆ ಇಬ್ಬರನ್ನು ಕಾನಹೊಸಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಯುವತಿಯ ಹತ್ಯೆ ನಡೆದ ದಿನ ಆರೋಪಿಯ ಕುಟುಂಬದವರು ತಲೆ ಮರೆಸಿಕೊಂಡಿದ್ದರು. ಪೊಲೀಸರು ತನಿಖೆ ಮಾಡಿ ಬಂಧಿಸಿದ್ದಾರೆ.

ಯುವತಿಯ ಹತ್ಯೆಗೈದು ಶರಣಾಗಿದ್ದ ಆರೋಪಿ ಬೋಜರಾಜನ ತಂದೆ ಬಸಣ್ಣ ಕೊಲೆಗೆ ಸಹಕಾರ ನೀಡಿದ್ದ ಆರೋಪದಡಿ ಹಾಗೂ ಬೋಜರಾಜನಿಗೆ ಅಪ್ರಾಪ್ತ ಬಾಲಕಿಯ ಜತೆ ಮದುವೆ ಮಾಡಿಸಿದ್ದ ಆರೋಪದಡಿ ಬಾಲ್ಯವಿವಾಹ ಪ್ರಕರಣದಲ್ಲಿ ತಾಯಿ ಕರಿಬಸಮ್ಮನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು