ಮಂಗಳವಾರ, ಡಿಸೆಂಬರ್ 1, 2020
18 °C

ಮನೆಗಳ್ಳರ ಬಂಧನ: 4.14 ಲಕ್ಷ ಮೌಲ್ಯದ ಆಭರಣ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಾಳಿಕೋಟೆ: ಪಟ್ಟಣದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಸ್ಥಳೀಯ ಪೊಲೀಸರು ಬಂಧಿತರಿಂದ ₹4.14 ಲಕ್ಷ ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯಪುರದ ಇಂದಿರಾ ನಗರದ ನಿವಾಸಿ ಅಬೂಬಕರ್ ರಜಾಕಸಾಬ್ ಝಂಡೆ, ಬಾಗಾಯಿ ಗಲ್ಲಿಯ ನಿವಾಸಿ ಮಹಮ್ಮದ್ ಯುಸೂಫ್ ಅಯೂಬ್ ಕೋಟಿಹಾಳ ಹಾಗೂ ಅರಿಕೇರಿ ಗಲ್ಲಿಯ ಸಮೀರ ನಬಿಲಾಲ ಇನಾಮದಾರ ಬಂಧಿತ ಆರೋಪಿಗಳು.

ಬಂಧಿತರೆಲ್ಲರೂ ಸಹ ಹಗಲಿನಲ್ಲಿಯೇ ಮನೆಗಳನ್ನ ಕಳ್ಳತನ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದು ಆರೋಪಿಗಳನ್ನು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಿವೈಎಸ್ಪಿ ಈ.ಶಾಂತವೀರ, ಸಿಪಿಐ ಆನಂದ ವಾಗ್ಮೋಡೆ, ಪಿಎಸ್ಸೈಗಳಾದ ಶಿವಾಜಿ ಪವಾರ ಹಾಗೂ ಗಂಗು ಜಿ.ಬಿರಾದಾರ, ಎಎಸೈ ರಂಗಪ್ಪ ಬಂಗಿ, ಅಶೋಕ ನಾಯ್ಕೋಡಿ, ಗುರಪ್ಪ ನಾಯಕ, ಮಡಿವಾಳಪ್ಪ ಪಟ್ಟೇದ, ಗಿರಿಮಲ್ಲಪ್ಪ ಚಲವಾದಿ, ಶಿವುಕುಮಾರ ಬಿರಾದಾರ, ಸಂಗಮೇಶ ಚಲವಾದಿ, ಶಿವಾನಂದ ಕಾರಜೋಳ, ಗುಂಡು ಗಿರಣಿವಡ್ಡರ, ಚಂದ್ರು ಹತ್ತರಕಿ ಅವರು ಈ ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ್ದು ಅವರಿಗೆ ಪ್ರಶಂಸಾ ಪತ್ರದೊಂದಿಗೆ ನಗದು ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.