ವಿಜಯಪುರ: ಇಡೀ ಜಗತ್ತು ಆಯುರ್ವೇದದತ್ತ ಮುಖ ಮಾಡಿ ನಿಂತಿದೆ. ಇಂದಿನ ಕಾಲದಲ್ಲಿ ಆಯುರ್ವೇದ ವ್ಯೆದ್ಯರಾದ ತಾವುಗಳು ಆಯುರ್ವೇದ ವಿಶೇಷ ಪದ್ದತಿಗಳನ್ನು ಜನಸಾಮಾನ್ಯರಿಗೆ ತಲುಪಿಸಿ ಆಯುರ್ವೇದ ಖ್ಯಾತಿಯನ್ನು ಬೆಳೆಸಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸಹ ಕುಲಸಚಿವ ಡಾ.ಸಂತೋಷ ಯಡಹಳ್ಳಿ ಹೇಳಿದರು.

ಬಿ.ಎಲ್.ಡಿ.ಇ ಸಂಸ್ಥೆ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಭವಿಷ್ಯದ ಮಾದರಿ ವ್ಯೆದ್ಯರಾಗಲು ತಾವು ಆಭ್ಯಸಿಸಿದ ಸಂಸ್ಥೆ ಶಿಕ್ಷಕರು-ಪಾಲಕರು ಪರಿಕಲ್ಪನೆಗಳನ್ನು ಪಾಲಿಸಬೇಕು ಎಂದರು.

ಹೊಸಪೇಟೆಯ ಟಿ.ಎಂ.ಎ.ಇ.ಎಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಎ.ಐ.ಸಣಕಲ್, ರೋಗಿಗಳ ರೋಗಕ್ಕೆ ಅನುಸಾರ ಸೂಕ್ತ ಚಿಕಿತ್ಸೆ ನೀಡಿ, ನೀವು ನೀಡಿದ ಚಿಕಿತ್ಸೆ ಫಲಕಾರಿಯಾದಾಗ ನೀವು ಪಡೆದ ವೈದ್ಯಕೀಯ ಅಧ್ಯಯನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಕಲಿಕೆ ಮುಗಿಯದ ಪಯಣ ಕಾಲಕ್ಕನುಣವಾಗಿ ಪ್ರತಿ ದಿನ ಅಧ್ಯಯನ ಮಾಡಬೇಕು. ವೈದ್ಯರು ರೋಗಿಗಳಿಂದ ಹೆಚ್ಚಿನ ಹಣವನ್ನು ಅಪೇಕ್ಷಿಸದೇ ನೀವು ಸರಿಯಾದ ಚಿಕಿತ್ಸೆ ನೀಡಿ, ರೋಗಿಯನ್ನು ಗುಣಮುಖರನ್ನಾಗಿಸಿದರೆ ಅದರಲ್ಲಿಯೇ ತೃಪ್ತಿ ಸಿಗಲಿದೆ ಎಂದರು.

ಪದವಿ ಪಡೆದ 60 ವ್ಯೆದ್ಯರಿಗೆ ಮತ್ತು 6 ಸ್ನಾತಕೋತ್ತರ ವ್ಯೆದ್ಯರಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.

ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ, ಉಪಪ್ರಾಚಾರ್ಯ ಡಾ.ಶಶಿಧರ ನಾಯಕ, ಡಾ.ಮಲ್ಲಮ್ಮ ಬಿರಾದಾರ, ಡಾ.ಕಾಶೀನಾಥ ಹದಿಮೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.