ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಹಂತದ ಕಾಮಗಾರಿಗೆ ವಾರದಲ್ಲಿ ಟೆಂಡರ್: ಗೋವಿಂದ ಕಾರಜೋಳ

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಿಸಿದ ಉಪ ಮುಖ್ಯಮಂತ್ರಿ
Last Updated 14 ಮೇ 2021, 12:18 IST
ಅಕ್ಷರ ಗಾತ್ರ

ವಿಜಯಪುರ: ತಾಲ್ಲೂಕಿನ ಬುರಣಾಪುರ ಗ್ರಾಮದ ಬಳಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಉಪ ಮುಖ್ಯಮಂತ್ರಿಗೋವಿಂದ ಕಾರಜೋಳಶುಕ್ರವಾರ ವೀಕ್ಷಣೆಮಾಡಿದರು.

ವಿಮಾನ ನಿಲ್ದಾಣದ ಎರಡನೇ ಹಂತದ ಕಾಮಗಾರಿ ಟೆಂಡರ್ ಕರೆಯಲು ನಿರ್ಣಯ ಮಾಡಲಾಗಿದೆ. ರೂ.125 ಕೋಟಿ ವೆಚ್ಚದಲ್ಲಿ ಟರ್ಮಿನಲ್ ಬಿಲ್ಡಿಂಗ್ ಸೇರಿದಂತೆ ಹಲವು ಕಾಮಗಾರಿ ಎರಡನೇ ಹಂತದಲ್ಲಿ ನಡೆಯುತ್ತವೆ ಎಂದು ಕಾರಜೋಳ ಹೇಳಿದರು.

ಎರಡನೇ ಹಂತದ ಕಾಮಗಾರಿಗೆ ಈ ವಾರದಲ್ಲಿ ಟೆಂಡರ್ ಕರೆಯಲಾಗುವುದು. ಈಗಾಗಲೇ ಮೊದಲ ಹಂತದ ರೂ.100 ಕೋಟಿ ವೆಚ್ಚದ ಕಾಮಗಾರಿ ಭರದಿಂದ ಸಾಗಿದೆ. ಗುತ್ತಿಗೆದಾರರು ನಿಗದಿತ ಅವಧಿಗೂ ಮುಂಚೆಯೇ ಕಾಮಗಾರಿ ಪೂರ್ಣ ಮಾಡಿ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಇನ್ನೂಳಿದ ರೂ.125 ಕೋಟಿ ವೆಚ್ಚದ ಕಾಮಗಾರಿ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಕೊರೊನಾ ಹೆಚ್ಚುತ್ತಿರೋ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿ ಮಾಡಬೇಕೆನ್ನುವ ತಜ್ಞರಸಲಹೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ತಜ್ಞರೊಂದಿಗೆ ಚರ್ಚಿಸಿ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿ ಮುಖ್ಯಮಂತ್ರಿ ನಿರ್ಣಯ ಮಾಡುತ್ತಾರೆ. ಈ ಕುರಿತು ಈಗಲೇ ಹೇಳಲಾಗದುಎಂದರು.

ಎಸ್.ಎಫ್‌. ಪಾಟೀಲ, ಬಿ.ವೈ.ಪವಾರ, ಕೃಷ್ಣಮೂರ್ತಿ ಜಂಗಮಶೆಟ್ಟಿ, ಪಿ.ಬಿ.ಆಲೂರ, ರಾಜು ಮುಜುಂದಾರಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT