ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ‌| ಪ್ರೀ–ವೆಡ್ಡಿಂಗ್ ಶೂಟಿಂಗ್ ತಾಣ ಆಲಮಟ್ಟಿ

ಚಂದ್ರಶೇಖರ ಕೋಳೇಕರ
Published 17 ಡಿಸೆಂಬರ್ 2023, 5:01 IST
Last Updated 17 ಡಿಸೆಂಬರ್ 2023, 5:01 IST
ಅಕ್ಷರ ಗಾತ್ರ

ಆಲಮಟ್ಟಿ: ಮದುವೆ ಜೀವನದಲ್ಲಿ ನಡೆಯುವ ಪ್ರಮುಖ ಘಟ್ಟವಾಗಿದ್ದು, ಅದರ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಇತ್ತೀಚೆಗೆ ಪ್ರಿವೆಡ್ಡಿಂಗ್  ಶೂಟ್‌ ಹಾಗೂ ಪೋಸ್ಟ್ ವೆಡ್ಡಿಂಗ್ ಶೂಟ್‌ ಮಾಡಿಸುವುದು ಟ್ರೆಂಡ್‌ ಆಗಿದೆ. 

ಅಂತಹ ಶೂಟಿಂಗ್ ಮಾಡಲು ಸುಂದರ ಸ್ಥಳವೂ ಅಗತ್ಯವಾಗಿದ್ದು, ಆಲಮಟ್ಟಿ ಉತ್ತಮ ಸ್ಥಳವಾಗಿದೆ.

ಈಗ ಮದುವೆ ಸೀಸನ್ ಆರಂಭಗೊಂಡಿದ್ದು,ಆಲಮಟ್ಟಿಯ ನಾನಾ ಸ್ಥಳಗಳಲ್ಲಿ ಪ್ರಿವೆಡ್ಡಿಂಗ್ ಶೂಟಿಂಗ್‌ಗಳ ತಂಡಗಳು ಕಾಣಿಸುತ್ತಿವೆ. ಉತ್ತರಕ ರ್ನಾಟಕದ ನಾನಾ ಕಡೆಯ ವಧು-ವರರು, ಫೋಟೊಗ್ರಾಫರ್‌ಗಳ ನೆಚ್ಚಿನ ತಾಣ ಆಲಮಟ್ಟಿಯಾಗಿದೆ.

ಆಲಮಟ್ಟಿ ಪೆಟ್ರೋಲ್ ಪಂಪ್‌ನಿಂದ ಆಲಮಟ್ಟಿ ಅಣೆಕಟ್ಟು ಸ್ಥಳದವರೆಗಿನ ಮಾರ್ಗ ಮಲೆನಾಡಿಗಿಂತಲೂ ಸುಂದರವಾಗಿದೆ. ರಸ್ತೆಯ ಅಕ್ಕಪಕ್ಕ ಬೆಳೆದಿರುವ ಸರ್ಕುಲಿಯಾ ಪೋಟಿಡಾ ಎಂಬ ಸಾಲು ಸಾಲು ಗಿಡಗಳು ಈ ಪರಿಸರವನ್ನು ಸುಂದರಗೊಳಿಸಿವೆ. ಇಲ್ಲಿ ಫೋಟೊಗ್ರಾಫಿಗೆ ಯಾವುದೇ ನಿರ್ಬಂಧವಿಲ್ಲ, ಯಾವುದೇ ಅನುಮತಿ, ಹಣ ನೀಡುವ ಅಗತ್ಯವೂ ಇಲ್ಲ.

ಆದ್ದರಿಂದಲೇ ಇಲ್ಲಿ ಪ್ರಿವೆಡ್ಡಿಂಗ್ ಫೋಟೊ ಶೂಟ್‌ ಹೆಚ್ಚಾಗಿ ನಡೆಯುತ್ತಿದೆ. ಫೋಟೊ ಶೂಟ್ ಮಾಡಲು ಮೂರ್ನಾಲ್ಕು ಬೆಲೆಬಾಳುವ ಕ್ಯಾಮರಾಗಳು, ಲೈಟಿಂಗ್ಸ್, ಮೇಕಪ್ ಮ್ಯಾನ್‌, ಬಟ್ಟೆ ಬದಲಾಯಿಸಲು ಪ್ರತ್ಯೇಕ ವ್ಯವಸ್ಥೆ, ಡ್ರೋಣ ಕಾಮೆರಾ ಬಳಕೆ... ಹೀಗೆ ಐದಾರು ಜನರ ತಂಡವೇ ಇರುತ್ತದೆ.

ಇದರ ಜತೆ ಇಲ್ಲಿಯ ಎಂಟ್ರನ್ಸ್ ಪ್ಲಾಜಾ, ಮೊಘಲ್ ಉದ್ಯಾನ, ಜಲಾಶಯದ ಹಿಂಭಾಗದ ಕೃಷ್ಣೆಯ ಹಿನ್ನೀರು ಕೂಡಾ ಫೋಟೊಗ್ರಫಿಯ ನೆಚ್ಚಿನ ತಾಣಗಳಾಗಿವೆ.

ಆಧುನಿಕ ಸೌಲಭ್ಯಗಳೊಂದಿಗೆ ಫೋಟೊಗ್ರಫಿ ಮಾಡುವ ಅನಿಕೇತ ಕಣಿಟಕರ ಪುಣೆ, ಇಂದ್ರಕುಮಾರ ದಸ್ತೇನವರ, ಸಂತೋಷ ಹಂಜಗಿ, ಶಿವಕುಮಾರ ಧಲಬಂಜನ್, ವೈಭವ ಮುಳ್ಳೂರು, ರವಿ ಬದಾಮಿ, ಪ್ರಶಾಂತ, ಸಂಗಮೇಶ ಬಡಿಗೇರ ಸೇರಿದಂತೆ ಹಲವು ಫೋಟೋಗ್ರಾಫರ್‌ಗಳ ನೆಚ್ಚಿನ ತಾಣವೂ ಆಲಮಟ್ಟಿಯಾಗಿದೆ.

ಆಲಮಟ್ಟಿಯ ಪೆಟ್ರೋಲ್ ಪಂಪ್‌ನಿಂದ ಆಲಮಟ್ಟಿ ಅಣೆಕಟ್ಟು ಕಡೆ ತೆರಳುವ ರಸ್ತೆ ಮಾರ್ಗದಲ್ಲಿ ನಡೆಯುತ್ತಿರುವ ಫೋಟೋ ಶೂಟ್‌ ದೃಶ್ಯ
ಆಲಮಟ್ಟಿಯ ಪೆಟ್ರೋಲ್ ಪಂಪ್‌ನಿಂದ ಆಲಮಟ್ಟಿ ಅಣೆಕಟ್ಟು ಕಡೆ ತೆರಳುವ ರಸ್ತೆ ಮಾರ್ಗದಲ್ಲಿ ನಡೆಯುತ್ತಿರುವ ಫೋಟೋ ಶೂಟ್‌ ದೃಶ್ಯ
ಆಲಮಟ್ಟಿಯ ಎಂಟ್ರನ್ಸ್ ಪ್ಲಾಜಾ ಬಳಿಯ ದೃಶ್ಯ
ಆಲಮಟ್ಟಿಯ ಎಂಟ್ರನ್ಸ್ ಪ್ಲಾಜಾ ಬಳಿಯ ದೃಶ್ಯ
ಫೋಟೋ ಶೂಟ್ ನಲ್ಲಿ ಆಲಮಟ್ಟಿಯಲ್ಲಿ ವಧು-ವರರು ಕಂಡು ಬಂದಿದ್ದು ಹೀಗೆ.
ಫೋಟೋ ಶೂಟ್ ನಲ್ಲಿ ಆಲಮಟ್ಟಿಯಲ್ಲಿ ವಧು-ವರರು ಕಂಡು ಬಂದಿದ್ದು ಹೀಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT