ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಮನೋಲ್ಲಾಸ ನೀಡುವ ‘ಮುದ್ದು ಮೀನು’

Published 10 ಸೆಪ್ಟೆಂಬರ್ 2023, 5:04 IST
Last Updated 10 ಸೆಪ್ಟೆಂಬರ್ 2023, 5:04 IST
ಅಕ್ಷರ ಗಾತ್ರ

ವಿಜಯಪುರ: ಐತಿಹಾಸಿಕ ಸುಂದರ ಸ್ಮಾರಕಗಳಿಂದ ದೇಶ, ವಿದೇಶದ ಗಮನ ಸೆಳೆಯುತ್ತಿರುವ ಗುಮ್ಮಟನಗರಿಗೆ ಮತ್ತೊಂದು ಪ್ರವಾಸಿತಾಣ ಇದೀಗ ಸೇರ್ಪಡೆಯಾಗಿದೆ.

ಹೌದು, ಅದುವೇ ಮೀನುಗಾರಿಕೆ ಇಲಾಖೆಯ ‘ಮುದ್ದು ಮೀನು ಸಂಗ್ರಹಾಲಯ’. ನಗರದ ಜಿಲ್ಲಾ ಕ್ರೀಡಾಂಗಣದ ಸಮೀಪ ಇರುವ ಹಳೆಯ ಮುದ್ದು ಮೀನು ಸಂಗ್ರಹಾಲಯ ನವೀಕರಣಗೊಂಡು ಇದೀಗ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ. 

ನವೀಕರಣಗೊಂಡ ಈ ಮುದ್ದು ಮೀನು ಸಂಗ್ರಹಾಲಯ ಪ್ರವಾಸಿ ತಾಣವಾಗಿ ರೂಪುಗೊಂಡಿದ್ದು, ಮಕ್ಕಳಿಗೆ ಆಕರ್ಷಕವಾಗಿದೆ. ಪ್ರತಿದಿನ ನೂರಾರು ಮಕ್ಕಳು, ಸಾರ್ವಜನಿಕರು ಭೇಟಿ ನೀಡಿ ಮೀನುಗಳ ಸೌಂದರ್ಯ ಆಸ್ವಾದಿಸುತ್ತಿದ್ದಾರೆ. ಸಂಗ್ರಹಾಲಯ ವೀಕ್ಷಣೆಯಿಂದ ಮನೋಲ್ಲಾಸದೊಂದಿಗೆ ವಿವಿಧ ಮೀನು ತಳಿಗಳ ಕುರಿತು ಆಸಕ್ತಿದಾಯಕ ಮಾಹಿತಿ ಪಡೆದುಕೊಳ್ಳಲು ಸಹಕಾರಿಯಾಗಿದೆ. 

ಮುದ್ದು ಮೀನು ಸಂಗ್ರಾಹಾಲಯವನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ವೀಕ್ಷಣೆ ಮಾಡುವುದರ ಜೊತೆಗೆ ಇದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು.
ಇರ್ಫಾನ್ ಬಾಂಗಿ,  ಉಪನಿರ್ದೇಶಕ, ಮೀನುಗಾರಿಕೆ ಇಲಾಖೆ 

ಈ ಮೀನು ಸಂಗ್ರಹಾಲಯದಲ್ಲಿ ಈ ಮೊದಲು ವಿವಿಧ ತಳಿಗಳ 18 ಅಕ್ವೈರಿಯಂನಲ್ಲಿ ಮುದ್ದು ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸದ್ಯ ಲಭ್ಯವಿರುವ ಈ ಸ್ಥಳದಲ್ಲಿಯೇ 36 ಅತ್ಯಾಕರ್ಷಕ ಅಕ್ವೈರಿಯಂಗಳನ್ನು ಇಡಲಾಗಿದೆ.

36 ಅಕ್ವೈರಿಯಂನಲ್ಲಿ ವಿವಿಧ ತಳಿಯ ಮೀನುಗಳನ್ನು ಸಂಗ್ರಹವಿದೆ. ಮೀನಿನ ಹೆಸರು ಅಲ್ಲಿ ನಮೂದಿಸಿದೆ. ಮೀನಿನ ಹೆಸರಿನ ಜೊತೆ ಒಂದು ಕ್ಯೂ.ಆರ್. ಕೋಡ್ ಅಳವಡಿಸಲಾಗಿದ್ದು, ಅದನ್ನು ಸ್ಕ್ಯಾನ್‌ ಮಾಡಿದ ತಕ್ಷಣ ಮೀನಿನ ಕುರಿತಾಗಿ ಸಮಗ್ರವಾದ ಮಾಹಿತಿ ವೀಕ್ಷಕರು ಪಡೆದುಕೊಳ್ಳಬಹುದಾಗಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರ ಆಸಕ್ತಿಯಿಂದ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಅಂದಾಜು ₹34 ಲಕ್ಷ ವೆಚ್ಚದಲ್ಲಿ ಮುದ್ದು ಮೀನು ಸಂಗ್ರಹಾಲಯವನ್ನು ನವೀಕರಣಗೊಳಿಸಲಾಗಿದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ ಆರ್‌.ಭಜಂತ್ರಿ.

ವಿವಿಧ ದೇಶಗಳ ಮೀನುಗಳು

ಈ ಮೀನು ಸಂಗ್ರಹಾಲಯದಲ್ಲಿ ಸುಮಾರು 35ಕ್ಕೂ ಹೆಚ್ಚು ದೇಶ ಮತ್ತು ವಿದೇಶಗಳ ಮೀನು ತಳಿಗಳನ್ನು ಪ್ರದರ್ಶನಕ್ಕಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರವೇಶ ಶುಲ್ಕ

ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರ ವರೆಗೆ ಹಾಗೂ ಮಧ್ಯಾಹ್ನ 3.30ರಿಂದ ರಾತ್ರಿ 8ರ ವರೆಗೆ ಮುದ್ದು ಮೀನು ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ಪ್ರಕಾಶ ಭಜಂತ್ರಿ. 

ಮಕ್ಕಳಿಗೆ ₹ 5 ಮತ್ತು ವಯಸ್ಕರಿಗೆ ₹ 10 ಟಿಕೆಟ್ ದರ ನಿಗದಿಪಡಿಸಲಾಗಿದ್ದು, ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ವಿಶೇಷ ವಿನಾಯಿತಿ ಸಹ ನೀಡಲಾಗಿದೆ. ಇಲ್ಲಿಗೆ ವೀಕ್ಷಣೆ ನೀಡುವವರಿಗೆ ಮೀನುಗಳ ಕುರಿತು ಮಾಹಿತಿ ಒದಗಿಸಲು ಮತ್ಸ್ಯಾಲಯದಲ್ಲಿ ಮಾರ್ಗದರ್ಶಕರೂ ಇದ್ದಾರೆ ಎನ್ನುತ್ತಾರೆ ಭಜಂತ್ರಿ.

ಮಳಿಗೆ ಆರಂಭಕ್ಕೆ ಯೋಜನೆ

‘ಮತ್ಸ್ಯಾಲಯದ ಆವರಣದಲ್ಲಿ ಎರಡು ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸಿ, ಒಂದರಲ್ಲಿ ನಿಗಮದಿಂದ ಮೀನು ಮತ್ತು ಖಾದ್ಯಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ಮತ್ತೊಂದರಲ್ಲಿ ಅಲಂಕಾರಿಕ ಮುದ್ದು ಮೀನು ಮರಿಗಳ ಮಾರಾಟ ಮಾಡುವ ಗುರಿ ಇಲಾಖೆ ಹೊಂದಿದೆ. ಇದರ ಜೊತೆಗೆ ಲಭ್ಯವಿರುವ ಸ್ಥಳದಲ್ಲಿಯೇ ಒಂದು ಕ್ಲಾಸ್ ರೂಂ ಸ್ಥಾಪಿಸಿ, ಅಲ್ಲಿ ಪ್ರೊಜೆಕ್ಟರ್ ಅಳವಡಿಸಿ ವೀಕ್ಷಣೆಗೆ ಬರುವ ಶಾಲಾ ವಿದ್ಯಾರ್ಥಿಗಳಿಗೆ, ಮಕ್ಕಳಿಗೆ, ಪ್ರವಾಸಿಗರಿಗೆ ಮತ್ತು ಆಸಕ್ತರಿಗೆ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ’ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಇರ್ಫಾನ್ ಬಾಂಗಿ.

‘ಮುದ್ದು ಮೀನುಗಳನ್ನು ವೀಕ್ಷಿಸುತ್ತಿರುವ ಜನ
‘ಮುದ್ದು ಮೀನುಗಳನ್ನು ವೀಕ್ಷಿಸುತ್ತಿರುವ ಜನ
ಮೀನು ಸಂಗ್ರಹಾಲಯದಲ್ಲಿ ಕಂಡುಬರುವ ಅತ್ಯಾಕರ್ಷಕ ಮುದ್ದು ಮೀನುಗಳು 
ಮೀನು ಸಂಗ್ರಹಾಲಯದಲ್ಲಿ ಕಂಡುಬರುವ ಅತ್ಯಾಕರ್ಷಕ ಮುದ್ದು ಮೀನುಗಳು 
ವಿಜಯಪುರ ನಗರದ ಮೀನು ಸಂಗ್ರಹಾಲಯದಲ್ಲಿ ಕಂಡುಬರುವ ಅತ್ಯಾಕರ್ಷಕ ಮುದ್ದು ಮೀನುಗಳು 
ವಿಜಯಪುರ ನಗರದ ಮೀನು ಸಂಗ್ರಹಾಲಯದಲ್ಲಿ ಕಂಡುಬರುವ ಅತ್ಯಾಕರ್ಷಕ ಮುದ್ದು ಮೀನುಗಳು 
ಮೀನು ಸಂಗ್ರಹಾಲಯದಲ್ಲಿ ಕಂಡುಬರುವ ಅತ್ಯಾಕರ್ಷಕ ಮುದ್ದು ಮೀನುಗಳು 
ಮೀನು ಸಂಗ್ರಹಾಲಯದಲ್ಲಿ ಕಂಡುಬರುವ ಅತ್ಯಾಕರ್ಷಕ ಮುದ್ದು ಮೀನುಗಳು 
ಮೀನು ಸಂಗ್ರಹಾಲಯದಲ್ಲಿ ಕಂಡುಬಂದ ವಿಭಿನ್ನ ಮೀನು 
ಮೀನು ಸಂಗ್ರಹಾಲಯದಲ್ಲಿ ಕಂಡುಬಂದ ವಿಭಿನ್ನ ಮೀನು 
ವಿಜಯಪುರ ನಗರದ ಮೀನು ಸಂಗ್ರಹಾಲಯದಲ್ಲಿ ಕಂಡುಬರುವ ಅತ್ಯಾಕರ್ಷಕ ಮುದ್ದು ಮೀನುಗಳು 
ವಿಜಯಪುರ ನಗರದ ಮೀನು ಸಂಗ್ರಹಾಲಯದಲ್ಲಿ ಕಂಡುಬರುವ ಅತ್ಯಾಕರ್ಷಕ ಮುದ್ದು ಮೀನುಗಳು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT