ಶನಿವಾರ, ನವೆಂಬರ್ 28, 2020
19 °C

ದೀಪಾವಳಿಗೆ ಪಟಾಕಿ ನಿಷೇಧಕ್ಕೆ ಬಿಜೆಪಿ ಶಾಸಕ‌ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

basanagouda patil yatnal

ವಿಜಯಪುರ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲು ಮುಂದಾಗಿರುವುದಕ್ಕೆ ಆಡಳಿತ ಪಕ್ಷ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ ನಲ್ಲಿ ಪೋಸ್ಟ್ ಹಾಕಿರುವ ಯತ್ನಾಳ, ಹಿಂದೂಗಳು ದೀಪಾವಳಿ, ದಸರಾ, ಗಣೇಶ ಹಬ್ಬಗಳಂದು ಸಾಮೂಹಿಕವಾಗಿ ಸೇರುತ್ತಾರೆ. ಆಗೆಲ್ಲ ಶಬ್ಧ ರಹಿತ ದೀಪಾವಳಿ, ಪರಿಸರ ಸ್ನೇಹಿ ಗಣೇಶೋತ್ಸವ ಎಂದೆಲ್ಲ ಬೋಧನೆ ಮಾಡಲಾಗುತ್ತದೆ. ಇದೇ ರೀತಿ ರಕ್ತರಹಿತ ಬಕ್ರೀದ್, ನಿಶಬ್ಧ ಶುಕ್ರವಾರ, ಪಟಾಕಿ ಇಲ್ಲದ ಡಿಸೆಂಬರ್ 31 ರಾತ್ರಿ ಜಾರಿಗೆ ಬರಲಿ ಎಂದು ಆಗ್ರಹಿಸಿದ್ದಾರೆ.

ಧ್ವನಿವರ್ಧಕ ಬಳಸಿ ಕೂಗುವುದು, ರಸ್ತೆಯಲ್ಲಿ ನಮಾಜ್ ಮಾಡುವುದು ಬೇಡ ಎಂದು ಬರೆದುಕೊಂಡಿದ್ದಾರೆ. ನಾವು ಮನೆಯಲ್ಲೇ ದೀಪ ಹಚ್ಚುತ್ತೇವೆ. ಅವರು ಸ್ಪೀಕರ್ ಹಚ್ಚದೇ ನಮಾಜ್ ಮಾಡಲಿ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು