ಬಸವನಬಾಗೇವಾಡಿ: ರಾಜ್ಯ ಸರ್ಕಾರವು ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ ಆಶ್ರಯದಲ್ಲಿ ಸೆ.1ರಿಂದ ಅಕ್ಟೋಬರ್ 1ರ ವರೆಗೆ ರಾಜ್ಯದಾದ್ಯಂತ ನಡೆಯುವ ‘ಬಸವ ಸಂಸ್ಕೃತಿ ಅಭಿಯಾನ’ಕ್ಕೆ ಸೋಮವಾರ ಬಸವನ ಬಾಗೇವಾಡಿಯಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.

ಬಸವ ಜನ್ಮ ಸ್ಮಾರಕದ ಮುಂಭಾಗದಿಂದ ಆರಂಭವಾದ ರಥಯಾತ್ರೆಯಲ್ಲಿ 1100ಕ್ಕೂ ಅಧಿಕ ಮಹಿಳೆಯರು ತಲೆ ಮೇಲೆ ಬಸವ ವಚನ ಗ್ರಂಥ ಹೊತ್ತು, 770 ಅಮರಗಣಂಗಳ ಬಿಂಬಿಸುವ 770 ಶರಣರು ಬಸವ ಧ್ವಜ ಹಿಡಿದು, ನೂರಾರು ಶರಣರು, ಬಸವಭಕ್ತರು ಮೆರವಣಿಗೆಯಲ್ಲಿ ಸಾಗಿದರು.

ಮೆರವಣಿಗೆಯಲ್ಲಿ ವೀರಗಾಸೆ ನೃತ್ಯ, ಹಾವೇರಿಯ ವೀರಗಾಸೆ ಕಲಾ ತಂಡ, ದೊಡ್ಡಾಟದ ಮುಖವಾಡ ಕಲಾತಂಡ, ಡೊಳ್ಳು ಮೇಳ, ಕರಡಿ ಮಜಲು, ನಂದಿಧ್ವಜ ಸೇರಿದಂತೆ ವಿವಿಧ ಜಾನಪದ, ಶಾಲಾಕಾಲೇಜು ವಿದ್ಯಾರ್ಥಿಗಳಿಂದ ಬಸವಾದಿ ಶರಣರ ವೇಷಭೂಷಣದ ಕಲಾ ತಂಡಗಳು ಭಾಗವಹಿಸಿದ್ದವು.

ಬಸವ ಮೂರ್ತಿಗೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ, ನಾಡಿನ ಎಲ್ಲ ಪೂಜ್ಯರ ಆಶಯದಂತೆ ಬಸವ ಜನ್ಮಭೂಮಿ ಬಾಗೇವಾಡಿಯಿಂದಲೇ ಬಸವ ಸಂಸ್ಕೃತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಬಸವ ಅಭಿಯಾನ ಕರ್ನಾಟಕವಷ್ಟೇ ಅಲ್ಲದೇ, ಇಡೀ ದೇಶಾದ್ಯಂತ ಪಸರಿಸಲಿ ಎಂದು ಹಾರೈಸಿದರು.

ಭಾಲ್ಕಿಯ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ರಾಜ್ಯ ಸರ್ಕಾರ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದಂತೆ ಸರ್ಕಾರದ ಕಡೆಯಿಂದ ಬಾಗೇವಾಡಿಯಲ್ಲಿ ಪ್ರತಿವರ್ಷ ಅದ್ದೂರಿಯಾಗಿ ಬಸವ ಜಯಂತಿ ಆಚರಿಸಿದರೆ ಐತಿಹಾಸಿಕ ಮೆರುಗು ನೀಡಿದಂತಾಗುತ್ತದೆ ಎಂದು ಹೇಳಿದರು.

ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ರಚಿಸಿಕೊಟ್ಟರೆ, 12 ನೇ ಶತಮಾನದ ಬಸವಾದಿ ಶರಣರು ವಿಶ್ವಕ್ಕೆ ಸಲ್ಲುವ ಸಂವಿಧಾನ ನೀಡಿದ್ದಾರೆ. ಅವುಗಳನ್ನು ನಾವೆಲ್ಲಾ ಆಚರಣೆಗೆ ತಂದರೆ ವಿಶ್ವದಲ್ಲಿ ಯುದ್ಧಗಳು ನಿಂತು ವಿಶ್ವಶಾಂತಿ ನೆಲೆಸುತ್ತದೆ ಎಂದರು.

ಬಸವನಾಡಿನಲ್ಲೇ ಬಸವತತ್ವಗಳ ಕೊಲೆಯಾಗುತ್ತಿರುವುದು ವಿಷಾದದ ಸಂಗತಿ. ವಿಶ್ವದಲ್ಲಿ ಬಸವತತ್ವಕ್ಕೆ ವಿರುದ್ಧವಾದ ನಡಾವಳಿಗಳು ನಡೆಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಇಂಗಳೇಶ್ವರದ ಚನ್ನಬಸವನ ಸ್ವಾಮೀಜಿ ಷಟ್ಸ್ಥಳ ಧ್ವಜಾರೋಹಣ ನೆರವೇರಿಸಿದರು. ಬೈಲೂರಿನ ನಿಷ್ಕಲ್ಮಷಮಠದ ನಿಜಗುಣಾನಂದ ಸ್ವಾಮೀಜಿ, ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಅಥಣಿ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಶೇಗುಣಶಿ ಶ್ರೀಗಳು, ಮಸಬಿನಾಳ ಶ್ರೀಗಳು, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವನ ಬಾಗೇವಾಡಿ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಸೇರಿದಂತೆ ವಿವಿಧ ಮಠಾಧೀಶರು, ಅಕ್ಕನ ಬಳಗ, ಮಾಜಿ ಸೈನಿಕರ ಸಂಘ, ಶರಣರ ಬಳಗ, ಸೇವಾದಳದ ಸದಸ್ಯರು, ಶಿಕ್ಷಕರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.