ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ | ಜಾತ್ರೆ: ಭಂಡಾರದಲ್ಲಿ ಮಿಂದೆದ್ದ ಜನತೆ

Published 11 ಫೆಬ್ರುವರಿ 2024, 16:24 IST
Last Updated 11 ಫೆಬ್ರುವರಿ 2024, 16:24 IST
ಅಕ್ಷರ ಗಾತ್ರ

ಆಲಮಟ್ಟಿ: ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆಯ ಅದ್ಧೂರಿಯಾಗಿ ಭಾನುವಾರ ಜರುಗಿತು.

ಅರಷಣಗಿ, ವಂದಾಲ, ಮಟ್ಟಿಹಾಳ, ಬೀರಲದಿನ್ನಿಯಿಂದ ಬಂದ ಗದ್ದೆಮ್ಮದೇವಿ ಹಾಗೂ ಬೀರಲಿಂಗೇಶ್ವರ ಪಂಚ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಬೀದಿಯಲ್ಲಿ ಅದ್ಧೂರಿಯಾಗಿ ಜರುಗಿತು. ಪಲ್ಲಕ್ಕಿ ಮೆರವಣಿಗೆಯಲ್ಲಿ ಜನತೆ ಭಂಡಾರದಲ್ಲಿ ಮಿಂದೆದ್ದರು.

ಬೀರಲಿಂಗೇಶ್ವರ ದೇವರ ಮೂರ್ತಿಗೆ ಅಭಿಷೇಕ, ಪುಷ್ಪಾರ್ಚನೆ, ಅಲಂಕಾರ, ಗಂಗಾಸ್ಥಳಕ್ಕೆ ಪೂಜೆ ನಡೆಯಿತು. ಡೊಳ್ಳು ಮೇಳ, ಭಜನೆ ಮೇಳೆ, ಕಳಸ ಹಿಡಿದ ಮಹಿಳೆಯರು ಭಾಗವಹಿಸಿದ್ದರು.

ಮಧ್ಯಾಹ್ನ 5 ಜತೆ ಸಾಮೂಹಿಕ ವಿವಾಹ ಜರುಗಿತು. ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ ವಂದಾಲ, ಜಿ.ಸಿ. ಮುತ್ತಲದಿನ್ನಿ, ಬಂದೇನವಾಜ್ ಡೋಲಚಿ, ಜಬ್ಬಾರ್ ಕೊಟ್ಯಾಳ, ಬಿ.ಎಚ್. ಗಣಿ, ಮಹೇಶ ಗಾಳಪ್ಪಗೋಳ, ಬುಡ್ಡೇಸಾಬ್ ಬಾಗವಾನ್, ಟಿ.ಎಸ್. ಬಿರಾದಾರ, ಗ್ಯಾನಪ್ಪಗೌಡ ಬಿರಾದಾರ, ಅಮರಪ್ಪಗೌಡ ಪಾಟೀಲ ಇದ್ದರು. ರಾತ್ರಿ ರಾಜ್ಯಮಟ್ಟದ ಟಗರಿನ ಕಾಳಗ ಜರುಗಿತು.

ಜಾತ್ರೆ ಅಂಗವಾಗಿ ಶನಿವಾರ ರಾತ್ರಿ ಖ್ಯಾತ ಜನಪದ ಗಾಯಕ (ಕ್ಯಾಸೆಟ್ ಗಾಯಕ, ನೀ ಡ್ರೈವರ್ ಖ್ಯಾತಿಯ) ಬಾಳು ಬೆಳಗುಂದಿ, ಮೈಲಾರಿ, ಜ್ಯೋತಿ, ಮಾಲಾಶ್ರೀ ಅವರ ಜನಪದ ಗೀತೆಗಳ ರಸಮಂಜರಿ ಕಾರ್ಯಕ್ರಮ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT