ಗೋಡ್ಸೆ ಹಿಂದೆ ಆರ್‌ಎಸ್‌ಎಸ್ ಶಕ್ತಿ ಇದ್ದ ಕಾರಣಕ್ಕೆ ಆತ ಗಾಂಧಿಯನ್ನು ಕೊಂದ. ಅದೇ ರೀತಿ ಇಂದು ಈ ವಕೀಲನ ಹಿಂದೆಯೂ ಆರ್‌ಎಸ್‌ಎಸ್ ಕುಮ್ಮಕ್ಕು ಇರುವ ಕಾರಣಕ್ಕೆ ಶೂ ಎಸೆಯುವ ಯತ್ನ ನಡೆಸಿದ್ದಾನೆ
ಸಿಜೆಐ ಬಿ.ಆರ್.ಗವಾಯಿ ವಿರುದ್ಧ ಶೂ ಎಸೆದು ಅವಮಾನ ಮಾಡಿದ ವಕೀಲನನ್ನು ತಕ್ಷಣ ಬಂಧಿಸಿ ಆತನನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಇಲ್ಲವಾದರೆ ನಾಳೆ ಪ್ರಧಾನಿ ವಿರುದ್ಧವೂ ಚಪ್ಪಲಿ ತೂರುತ್ತಾರೆ
ಇದು ಅಂಬೇಡ್ಕರ್ ಮತ್ತು ಸಂವಿಧಾನದ ವಿರುದ್ಧ ಬಿಜೆಪಿ ಬೆಂಬಲಿತ ವ್ಯವಸ್ಥಿತ ದಾಳಿ. ಇದರ ಹಿಂದೆ ಆರ್‌ಎಸ್‌ಎಸ್ ಇದೆ. ಆರ್‌ಎಸ್‌ಎಸ್ ಮುಖ್ಯಸ್ಥನನ್ನು ಮೊದಲು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು
-ಎಸ್.ಎಂ.ಪಾಟೀಲ ಗಣಿಹಾರ ಕೆಪಿಸಿಸಿ ವಕ್ತಾರ
ದಲಿತರು ಉನ್ನತ ಸ್ಥಾನದಲ್ಲಿರುವುದನ್ನು ನೋಡಲು ಮನುವಾದಿಗಳಿಗೆ ಸಾಧ್ಯವಾಗುತ್ತಿಲ್ಲ. ವಕೀಲನ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಕಾಂಗ್ರೆಸ್‌ನಲ್ಲಿರುವ ಕೆಲ ಮನುವಾದಿಗಳು ಇದುವರೆಗೂ ಘಟನೆ ಖಂಡಿಸಿಲ್ಲದಿರುವುದು ದುರ್ದೈವ