ಸೋಮವಾರ, ಆಗಸ್ಟ್ 15, 2022
26 °C

ವಿಜಯಪುರ: ಅಂಗವಿಕಲರಿಗೆ, ಆರೈಕೆದಾರರಿಗೆ ಕೋವಿಡ್ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಕೋವಿಡ್-19 ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕಾಗಿ ಸರ್ಕಾರವು ಅಂಗವಿಕಲರನ್ನು ಆಧ್ಯತಾ ಗುಂಪು ಎಂದು ಪರಿಗಣಿಸಿ 18 ವರ್ಷ ಮೇಲ್ಪಟ್ಟ ಅಂಗವಿಕಲರಿಗೆ ಹಾಗೂ ಅವರ ಒಬ್ಬ ಆರೈಕೆದಾರರಿಗೆ ಲಸಿಕೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಆಶು ನಧಾಪ್‌ ತಿಳಿಸಿದ್ದಾರೆ.

ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಲು ಅಂಗವಿಕಲರು ಸರತಿ ಸಾಲಿನಲ್ಲಿ ನಿಲ್ಲದೇ ನೇರವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಬಹುದಾಗಿದೆ. ಯಾವುದೇ ಭಯ, ಅಂಜಿಕೆ ಇಲ್ಲದೆ ಸ್ವಯಂ ಪ್ರೇರಿತರಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ(ವಿಆರ್‌ಡಬ್ಲ್ಯು) ಹಾಗೂ ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು(ಎಂಆರ್‌ಡಬ್ಲ್ಯ), ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ತಾಲ್ಲೂಕುವಾರು ಈ ಕೆಳಗಿನ ನೋಡಲ್ ಅಧಿಕಾರಿಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಇಂಡಿ ತಾಲ್ಲೂಕಿನ ನೋಡಲ್ ಅಧಿಕಾರಿ ಭಾರತಿ ಹಡಪದ ಮೊಬೈಲ್‌ ಸಂಖ್ಯೆ 8050217644.

ಸಿಂದಗಿ ತಾಲ್ಲೂಕಿನ ನೋಡಲ್ ಅಧಿಕಾರಿಗಳು ಎಸ್. ಎನ್. ಕೊರವಾರ ಮೊಬೈಲ್‌ ಸಂಖ್ಯೆ 8749029113.

ವಿಜಯಪುರ ನಗರ ನೋಡಲ್ ಅಧಿಕಾರಿಗಳು ಸವಿತಾ ಮಡಿವಾಳರ ಮೊಬೈಲ್‌ ಸಂಖ್ಯೆ 9901162034.

ವಿಜಯಪುರ ಗ್ರಾಮೀಣ ನೋಡಲ್ ಅಧಿಕಾರಿ ಅನಿಲ್ ಉಕ್ಕಲಿ ಮೊಬೈಲ್‌ ಸಂಖ್ಯೆ 9620308698.

ಮದ್ದೇಬಿಹಾಳ ನೋಡಲ್ ಅಧಿಕಾರಿ ಪಿಎಸ್ ಹಜೇರಿ ಮೊಬೈಲ್‌ ಸಂಖ್ಯೆ 9741552051.

ಬಸವನ ಬಾಗೇವಾಡಿ ನೋಡಲ್ ಅಧಿಕಾರಿ ಜ್ಯೋತಿ ಬಿರಾದಾರ್ ಮೊಬೈಲ್‌ ಸಂಖ್ಯೆ 9591242211.

ಚಡಚಣ ನೋಡಲ್ ಅಧಿಕಾರಿ ನೂತನ್ ಬಿರಾದರ್ ಮೊಬೈಲ್‌ ಸಂಖ್ಯೆ 9972144121

ಇಂಡಿ ಎಂಆರ್‌ಡಬ್ಲ್ಯ ಪರಶುರಾಮ ಬೋಸ್ಲೆ  9972441464, ಸಿಂದಗಿ ಎಂಆರ್‌ಡಬ್ಲ್ಯ ಮುತ್ತು ಸಾತಿಹಾಳ 9980019635, ವಿಜಯಪುರ ನಗರ ಎಂಆರ್‌ಡಬ್ಲ್ಯ ರವಿ ರಾಠೋಡ  9035553337, ಮುದ್ದೇಬಿಹಾಳ ಎಂಆರ್‌ಡಬ್ಲ್ಯ ಎಸ್ ಕೆ ಘಾಟಿ 9740682979, ಬಸವನ  ಬಾಗೇವಾಡಿ ಎಂಆರ್‌ಡಬ್ಲ್ಯ ಎಂ.ಎಸ್. ಬಿರಾದಾರ ‌9008690752 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು