ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ದಲಿತ ಬರಹಗಾರರಿಗೆ ಆಳ, ವಿಸ್ತಾರ ಅಧ್ಯಯನ ಅಗತ್ಯ’

ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಬೆಳ್ಳಿ ಸಂಭ್ರಮ ಪ್ರಶಸ್ತಿ ಪ್ರದಾನ
Published : 30 ಜುಲೈ 2023, 15:20 IST
Last Updated : 30 ಜುಲೈ 2023, 15:20 IST
ಫಾಲೋ ಮಾಡಿ
Comments

ವಿಜಯಪುರ: ‘ದಲಿತ ಬರಹಗಾರರಿಗೆ ಅಳವಾದ ಮತ್ತು ವಿಸ್ತಾರವಾದ ಅಧ್ಯಯನದ ಅಗತ್ಯ ಇದೆ’ ಎಂದು ಸಾಹಿತಿ ಡಾ. ಮೂಡ್ನಕೋಡು ಚಿನ್ನಸ್ವಾಮಿ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ನಡೆದ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಬೆಳ್ಳಿ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ದಲಿತ ಬರಹಗಾರರು, ‘ದಲಿತ ಬರಹಗಾರರಿಗೆ, ವಿದ್ಯಾರ್ಥಿಗಳಿಗೆ ಕಾಲೇಜು, ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಕೆಲವರು ಆಪಾದಿಸುತ್ತಾರೆ. ಆದರೆ, ಇದನ್ನು ನಾನು ಒಪ್ಪುವುದಿಲ್ಲ. ಅಂದು ಅಂಬೇಡ್ಕರ್‌ಗೆ ಯಾರು ಪ್ರೋತ್ಸಾಹ ನೀಡಿದ್ದರು? ಹೀಗಾಗಿ ನಮಗೆಲ್ಲ ಅಂಬೇಡ್ಕರ್‌ ಅವರೇ ದೊಡ್ಡ ಪ್ರೋತ್ಸಾಹ’ ಎಂದು ಹೇಳಿದರು.

‘ಭಾರತದ ನೈಜ ಜನ ಜೀವನದ ಅನುಭವ ಇರುವುದೇ ದಲಿತ ಸಾಹಿತ್ಯದಲ್ಲಿ. ಹಾಗಾಗಿ ಇದು ಬೇರೆ ಭಾಷೆಗಳಿಗೆ ಹೆಚ್ಚೆಚ್ಚು ಭಾಷಾಂತರವಾಗಬೇಕಿದೆ. ಅನುವಾದಕ್ಕೆ ದಲಿತ ಭಾಷಾಂತರಕಾರರೇ ಬೇಕು.‌ ಆಗ‌ ಮಾತ್ರ ಯಥಾ ಪ್ರಕಾರ ಅನುವಾದ ಸಾಧ್ಯ’ ಎಂದರು.

‘ಬ್ರಾಹ್ಮಣ ಧರ್ಮದ ಅವಿವೇಕವನ್ನು ತೆರೆದು ತೋರಿಸುವ ಶಕ್ತಿ ದಲಿತ ಸಾಹಿತ್ಯಕ್ಕೆ ಮಾತ್ರ ಇದೆ. ಈಗಲೂ ಜನರಿಗೆ ಪುರಾಣಗಳನ್ನು ನಂಬಿಸಿ, ಮೂರ್ಖರನ್ನಾಗಿ ಮಾಡಲು ಬ್ರಾಹ್ಮಣರು ಹವಣಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಅಂಬೇಡ್ಕರ್ ಎಂಬ ಒಬ್ಬ ವ್ಯಕ್ತಿಯ ಹೋರಾಟದಿಂದ ದಲಿತರು ಇಂದು ಸಮಾನತೆ, ಸ್ವಾತಂತ್ರ್ಯದ ಹಕ್ಕುಗಳನ್ನು ಪಡೆದುಕೊಂಡು ಸುಧಾರಣೆಯಾಗಿದ್ದಾರೆ’ ಎಂದರು.

ಸಮ್ಮೇಳನಾಧ್ಯಕ್ಷ ಪ್ರೊ.ಎಚ್‌.ಟಿ.ಪೋತೆ, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ, ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ.ಚೆಲುವರಾಜು ಇದ್ದರು.

ವಿಜಯಪುರ ನಗರದ ಕಂದಗಲ್ ಹನುಮಂತ ರಾಯ ರಂಗಮಂದಿರದಲ್ಲಿ ಭಾನುವಾರ ನಡೆದ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸುದ್ದಿಗಳನ್ನು ವಿಶೇಷವಾಗಿ ಪ್ರಕಟಿಸಿದ ‘ಪ್ರಜಾವಾಣಿ’ ಪತ್ರಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು  –ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಕಂದಗಲ್ ಹನುಮಂತ ರಾಯ ರಂಗಮಂದಿರದಲ್ಲಿ ಭಾನುವಾರ ನಡೆದ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸುದ್ದಿಗಳನ್ನು ವಿಶೇಷವಾಗಿ ಪ್ರಕಟಿಸಿದ ‘ಪ್ರಜಾವಾಣಿ’ ಪತ್ರಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು  –ಪ್ರಜಾವಾಣಿ ಚಿತ್ರ

Quote - ದಲಿತರಿಗೆ ಕೇವಲ ಅಕ್ಷರ ಮಾತ್ರವಲ್ಲ ಅನ್ನ ನೀರು ಕೊಡದೇ ಬ್ರಾಹ್ಮಣರು ವಂಚಿಸಿದರು. ಬಾಬಾಸಾಹೇಬ್ ಅಂಬೇಡ್ಕರ್ ಬಾರದೇ ಇದಿದ್ದರೇ ದಲಿತರ ಪರಿಸ್ಥಿತಿ ಬದಲಾಗುತ್ತಿರಲಿಲ್ಲ –ಡಾ. ಮೂಡ್ನಕೋಡು ಚಿನ್ನಸ್ವಾಮಿ ಸಾಹಿತಿ 

Cut-off box - ಗೌರವ ಪ್ರಶಸ್ತಿ ಪುಸ್ತಕ ಪ್ರಶಸ್ತಿ ಪ್ರದಾನ ವಿಜಯಪುರ: ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಲೇಖಕರಿಗೆ ಗೌರವ ಪ್ರಶಸ್ತಿ ಪುಸ್ತಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ದಲಿತ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರ್.ದೊಡ್ಡೇಗೌಡ ವೀರ ಹನುಮಾನ ಶ್ರೀಶೈಲ ನಾಗರಾಳ ಡಾ.ಗವಿಸಿದ್ದಪ್ಪ ಪಾಟೀಲ ಮುತುರ್ಜಾ ಬೇಗಂ ಕೊಡಗಲಿ ಹಾರೋಹಳ್ಳಿ ರವೀಂದ್ರ ಪರಶುರಾಮ ಶಿವಶರಣ ಹಾಗೂ ನರೇಂದ್ರ ನಾಗವಾಲ (ಸಮಾಜ ಸೇವೆ) ಮುಳ್ಳೂರ ಶಿವಮಲ್ಲು (ದಲಿತ ಚಳವಳಿ) ಡಾ.ಸಂಜೀವಕುಮಾರ್ ಮಾಲಗತ್ತಿ (ಪತ್ರಿಕಾರಂಗ) ರಾಜು ವಿಜಯಪುರ (ಪತ್ರಿಕಾರಂಗ) ಸೌಜನ್ಯ ಕರಡೋಣಿ (ಚಿತ್ರಕಲೆ) ಸಿ.ಆರ್.ನಟರಾಜ (ಸಂಗೀತ) ಹಾಗೂ ದೇವು ಕೆ.ಅಂಬಿಗ (ಸಿನಿಮಾ) ಅವರಿಗೆ ‘ಬೆಳ್ಳಿ ಸಂಭ್ರಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುಸ್ತಕ ಪ್ರಶಸ್ತಿ: ಬಿದಲೋಟಿ ರಂಗನಾಥ ಮತ್ತು ಡಾ.ಸದಾಶಿವ ದೊಡಮನಿ (ಕಾವ್ಯ) ಡಾ.ಶಾಂತನಾಯ್ಕ ಶಿರಗಾನಹಳ್ಳಿ (ಕಾದಂಬರಿ) ರೇಣುಕಾ ಹೆಳವರ (ಕತೆ) ಪಿ.ಆರಡಿ ಮಲ್ಲಯ್ಯ ಕಟ್ಟೆರ (ಸಂಶೋಧನೆ) ಡಾ.ಪ್ರಸನ್ನ ನಂಜಾಪುರ ಮತ್ತು ಡಾ.ಗಿರೀಶ ಮೂಗ್ತಿಹಳ್ಳಿ (ವಿಮರ್ಶೆ) ಪ್ರಭುಲಿಂಗ ನೀಲೂರೆ (ಅನುವಾದ) ಗೌಡಗೆರೆ ಮಾಯಾಶ್ರೀ (ಹರಟೆ) ಡಾ.ಎಚ್.ಡಿ.ಉಮಾಶಂಕರ (ಅಂಕಣ ಬರಹ) ಸೋಮಲಿಂಗ ಗೆಣ್ಣೂರ (ವೈಚಾರಿಕ) ಡಾ.ಎಂ.ಬಿ.ಕಟ್ಟಿ (ಸಂಕೀರ್ಣ) ಡಾ.ಹೊಂಬಯ್ಯ ಹೊನ್ನಲಗೆರೆ ಮತ್ತು ಡಾ.ಅಮರೇಶ ಯತಗಲ್ (ಸಂಪಾದನೆ) ಡಾ. ಪೂರ್ಣಿಮಾ ಧಾಮಣ್ಣವರ ಮತ್ತು ರಾಯಸಾಬ ದರ್ಗಾದವರ (ಮೊದಲ ಕೃತಿ) ಅವರಿಗೆ ಪುಸ್ತಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಗಣಪತಿ ಚಲವಾದಿ ತಾಯರಾಜ್ ಮರ್ಚಟಹಾಳ ಮತ್ತು ಹುಸೇನಪ್ಪ ಅಮರಾಪೂರ ಅವರಿಗೆ ದಲಿತ ಸಾಹಿತ್ಯ ಪರಿಷತ್ತಿನ ‘ಅತ್ಯುತ್ತಮ ಸಂಘಟಕ ಸಾಧಕಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT