ವಿಜಯಪುರ: ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಕ್ಷೇತ್ರದ ತೇಜೋವಧೆ ಖಂಡಿಸಿ ನಗರದಲ್ಲಿ ಬುಧವಾರ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಸಿದ್ದೇಶ್ವರ ಗುಡಿಯಿಂದ ಆರಂಭವಾದ ಪ್ರತಿಭಟನಾ ಜಾಥಾದಲ್ಲಿ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ್ದ ಸಾವಿರಾರು ಜನರು ಪಾಲ್ಗೊಂಡಿದ್ದರು. ಗಾಂಧಿ ಚೌಕಿಯಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಲಾಯಿತು.

ಡಾ.ಬಿ.ಆರ್. ಅಂಬೇಡ್ಕರ್ ಚೌಕಿಯಲ್ಲಿ ಪ್ರತಿಭಟನಾ ಸಮಾವೇಶ ನಡೆಸಿ, ಧರ್ಮಸ್ಥಳ ವಿರುದ್ಧ ಅಪಪ್ರಚಾರ ನಡೆಸುತ್ತಿರುವ, ಕ್ಷೇತ್ರದ ಪಾವಿತ್ರ್ಯ ಕೆಡಿಸುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ಮನವಿ ಸಲ್ಲಿಸಿದರು.

ಎಸ್ಐಟಿ ಇದುವರೆಗೆ ನಡೆಸಿರುವ ಶೋಧನೆಯಲ್ಲಿ ಯಾವುದೇ ಮಾನವ ಅಸ್ಥಿಪಂಜರದ ಕುರುಹುಗಳು ದೊರಕಿಲ್ಲದ ಕಾರಣ ತನಿಖೆ ನಿಲ್ಲಿಸಬೇಕು, ಅನಾಮಿಕ ವ್ಯಕ್ತಿಯನ್ನು ಬಂಧಿಸಿ ಶಿಕ್ಷೆ ನೀಡಬೇಕು, ಶ್ರದ್ಧಾ ಕೇಂದ್ರದ ವಿರುದ್ಧ ಅಪಪ್ರಚಾರ ನಡೆಸಿರುವ ನಕಲಿ ಹೋರಾಟಗಾರರ ವಿರುದ್ಧ ಕ್ರಮಕೈಗೊಳ್ಳವೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರವು ದುಡಿಯುವ ವರ್ಗಗಳಿಗೆ ಆರ್ಥಿಕ ನೆರವು ನೀಡಿ ಮಹಿಳಾ ಸಬಲೀಕರಣ ಮಾಡಿದ ಕೀರ್ತಿ ಸಲ್ಲುತ್ತದೆ ಎಂದರು.

ಸಾಮಾಜಿಕ ಚಿಂತಕ ಎಸ್. ವಿ. ಪಾಟೀಲ ಮಾತನಾಡಿ, ಧರ್ಮಕ್ಕೆ ಇನ್ನೊಂದು ಹೆಸರೇ ಧರ್ಮಸ್ಥಳ. ನ್ಯಾಯಕ್ಕೆ ಹೆಸರಾದವರು ವೀರೇಂದ್ರ ಹೆಗಡೆಯವರು. ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ನಮ್ಮ ಹೋರಾಟ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಅನಾಮಿಕ ವ್ಯಕ್ತಿಯ ನಡತೆ ಸಂಶಯ ಉಂಟುಮಾಡಿದೆ. ಸರ್ಕಾರ ಎಸ್ಐಟಿ ತನಿಖೆ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ, ಸರ್ಪಭೂಷಣ ಶಿವಯೋಗಿ ಸ್ವಾಮೀಜಿ, ಕರಭಂಟನಾಳ ಶಿವಕುಮಾರ ಸ್ವಾಮೀಜಿ, ತಡವಾಲಗ ರಾಚೋಟೇಶ್ವರ ಸ್ವಾಮೀಜಿ, ಅಹಿರಸಂಗದ ಅಭಿನವ ಶಿವಾಚಾರ್ಯ ಸ್ವಾಮೀಜಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮುಖಂಡರಾದ ಅಪ್ಪುಗೌಡ ಪಾಟೀಲ ಮನಗೂಳಿ, ಉಮೇಶ ಕಾರಜೋಳ, ಶೀತಲಕುಮಾರ ಯೋಗಿ, ಶಿವಾನಂದ ದೇಸಾಯಿ, ಮಹಾವೀರ ಪಾರೇಖ, ಸಂಜೀವ ಐಹೊಳ್ಳಿ, ಸಿದಗೊಂಡ ಬಿರಾದಾರ, ಯೋಗೇಶ ನಡುವಿನಕೇರಿ, ಮಹಾಂತೇಶ ಆಸಂಗಿ, ರಾಜು ಮಗಿಮಠ, ಚಂದ್ರಶೇಖರ ಕವಟಗಿ, ವಿ.ಸಿ.ನಾಗಠಾಣ, ರವೀಂದ್ರ ಬಿಜ್ಜರಗಿ, ಸಿದ್ರಾಮಪ್ಪ ಉಪ್ಪಿನ, ಅಪ್ಪಾಸಾಹೇಬ ಮುತ್ತಿನ, ರಾಘು ಅಣ್ಣಿಗೇರ, ಮಾಯಕ್ಕ ಚೌಧರಿ, ಪ್ರೇಮಾನಂದ ಬಿರಾದಾರ, ರಾಹುಲ ಜಾಧವ, ಶಿವರುದ್ರಪ್ಪ ಬಾಗಲಕೋಟ, ರಾಜು ಜಾಧವ, ಉಮೇಶ ವಂದಾಲ, ಬಿ. ಡಿ. ಪಾಟೀಲ, ಶ್ರೀಮಂತ ಶಲಗಾ, ಡಾ ಆನಂದ ಕುಲಕರ್ಣಿ, ಸಾತಪ್ಪ ಗೊಂಗಡಿ, ಧರೆಪ್ಪ ಹೊನವಾಡ, ಶ್ರೀಕೃಷ್ಣ ಗೋನಾಳಕರ, ಉಮೇಶ ಗುಮ್ಮಶೆಟ್ಟಿ, ಲಕ್ಷ್ಮಿ ಕನ್ನೊಳ್ಳಿ, ಪ್ರವೀಣ ಕಾಸಾರ, ಸಾವಿತ್ರಿ ಕಲ್ಯಾಣಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ನಮ್ಮೆಲ್ಲರ ಪುಣ್ಯ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಕಳಂಕ ತಂದಿರುವರನ್ನು ಪಂಪರು ಪರೀಕ್ಷೆಗೆ ಒಳಪಡಿಸಬೇಕು. ಸರ್ಕಾರ ಕ್ರಮಕೈಗೊಳ್ಳಬೇಕು.
-ಅಶೋಕ ಅಲ್ಲಾಪೂರ, ಬಿಜೆಪಿ ಮುಖಂಡ

ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿರುದ್ಧದ ಅಪಪ್ರಚಾರ ಸಹಿಸುವುದಿಲ್ಲ. ಇದರಿಂದ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆಯಾಗಿದ
-ಅರುಣ ಶಹಾಪುರ ವಿಧಾನ ಪರಿಷತ್ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.