ಮುದ್ದೇಬಿಹಾಳ: ತಾವು ಗಳಿಸಿದ್ದರಲ್ಲಿ ಸಮಾಜದ ಸೇವೆಯ ಮೂಲಕ ತಮ್ಮ ತಂದೆ ತಾಯಿಯನ್ನು ಬಡವರಲ್ಲಿ ನೋಡುವ ಪರೋಪಕಾರದ ಗುಣ ಸಮಾಜ ಸೇವಕ ಅಯೂಬ್ ಮನಿಯಾರ ಅವರಲ್ಲಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಪಟ್ಟಣದ ಮನಿಯಾರ ಚಾರಿಟೇಬಲ್ ಟ್ರಸ್ಟ್ನಿಂದ ಸೋಮವಾರ ಹಮ್ಮಿಕೊಂಡಿದ್ದ ನೇತ್ರ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಫಲಾನುಭವಿಗಳಿಗೆ ಕನ್ನಡಕ ಹಾಗೂ ಔಷಧ ಉಚಿತ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಣ್ಣು ಕಾಣದವರಿಗೆ ದೃಷ್ಟಿ ದೊರಕಿಸಿಕೊಡುವ ಕೆಲಸ ಮಾಡುತ್ತಿರುವ ಅಯ್ಯೂಬ ಮನಿಯಾರ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.

ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಪ್ರಯೋಜನ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.

ಇಳಕಲ್ ಪ್ರವಚನಕಾರ ಲಾಲಹುಸೇನ ಕಂದಗಲ್, ಮನಿಯಾರ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಅಯ್ಯೂಬ್ ಮನಿಯಾರ, ಅನುಗ್ರಹ ಕಣ್ಣಿನ ಆಸ್ಪತ್ರೆ ವೈದ್ಯ ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ, ಆಲಮೇಲದ ಜಗದೇವ ಮಲ್ಲಿಬೊಮ್ಮ ಸ್ವಾಮೀಜಿ ಮಾತನಾಡಿದರು.

ಸಮಾಜ ಸೇವಕ ಶಂಕರಗೌಡ ಹೊಸಮನಿ, ಬನಶ್ರೀ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ರೂಪಸಿಂಗ ಲೋಣಾರಿ, ಉದ್ಯಮಿ ಮದನಸಾಬ ಸಾಲವಾಡಗಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಡಾ.ಎ.ಎ.ನಾಲಬಂದ, ಅಫ್ತಾಬ ಮನಿಯಾರ, ಎ.ಎಂ.ಎತ್ತಿನಮನಿ, ಮೈಬೂಬ ನಾಲತವಾಡ, ಐ.ಎಲ್.ಮಮದಾಪೂರ, ಹಾಜಿಮಲಂಗ ಎಕಿನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.