ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾಪುರ | ವಿಶೇಷ ರೈಲುಗಳ ಸಂಚಾರ ವಿಸ್ತರಣೆ

Published 29 ಜನವರಿ 2024, 15:45 IST
Last Updated 29 ಜನವರಿ 2024, 15:45 IST
ಅಕ್ಷರ ಗಾತ್ರ

ಸೋಲಾಪುರ: ಸೋಲಾಪುರದಿಂದ ವಿವಿಧ ನಗರಗಳಿಗೆ ತೆರಳುವ ವಿಶೇಷ ರೈಲುಗಳ ಸಂಚಾರವನ್ನು ವಿಸ್ತರಣೆ ಮಾಡಲಾಗಿದೆ.

ಸೋಲಾಪುರ - ಲೋಕ ಮಾನ್ಯ ತಿಲಕ್‌-ಸೋಲಾಪುರ (ರೈಲು ಸಂಖ್ಯೆ 01435/01436) ವಿಶೇಷ ಸಾಪ್ತಾಹಿಕ ರೈಲು ಫೆ.6ರಿಂದ ಮಾ.26ರ ವರೆಗೆ ಸಂಚರಿಸಲಿದೆ.

ಸೋಲಾಪುರ- ತಿರುಪತಿ - ಸೋಲಾಪುರ(ರೈಲು ಸಂಖ್ಯೆ 01437/01438) ವಿಶೇಷ ಸಾಪ್ತಾಹಿಕ ರೈಲು ಫೆ.1ರಿಂದ ಮಾ.28 ರ ವರೆಗೆ ಸಂಚರಿಸಲು ಅಧಿಸೂಚನೆ ಹೊರಡಿಸಿದೆ. ಈ ರೈಲು ಹೆಚ್ಚುವರಿಯಾಗಿ ಹುಮನಾಬಾದ್‌, ಕಮಲಾಪುರ, ಕಲಬುರ್ಗಿಯಲ್ಲಿ ನಿಲುಗಡೆಯಾಗಲಿದೆ.

ಪುಣೆ-ಅಮರಾವತಿ- ಪುಣೆ(ರೈಲು ಸಂಖ್ಯೆ 01439/01440) ವಿಶೇಷ ರೈಲು ಫೆ.3ರಿಂದ ಮಾ.31ರ ವರೆಗೆ ಸಂಚರಿಸಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ಸೋಲಾಪುರ ರೈಲ್ವೆ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT