ಮಂಗಳವಾರ, ನವೆಂಬರ್ 24, 2020
20 °C

ಹಣಕಾಸು ವ್ಯವಹಾರ; ಮತ್ತೊಂದು ಶೂಟ್‌ಔಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ನಗರದ ಮನಗೂಳಿ ಅಗಸಿ ಸಮೀಪದ ಸ್ಮಶಾನದ ಬಳಿ ಇರುವ ಬಿಡಿಎ ಕಾಂಪ್ಲೆಕ್‌ ಎದುರು ಬುಧವಾರ ರಾತ್ರಿ ಶೂಟ್‌ಔಟ್‌ ಪ್ರಕರಣ ನಡೆದಿದ್ದು, ಘಟನೆಯಿಂದ ಗುಮ್ಮಟನಗರಿ ಜನ ಬೆಚ್ಚಿಬಿದ್ದಿದ್ದಾರೆ.

ಹಣಕಾಸಿನ ವಿಷಯವಾಗಿ ವ್ಯಕ್ತಿಗಳಿಬ್ಬರು ತಮ್ಮ ಸಂಬಂಧಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಜೊತೆಗೆ ಮತ್ತೊಬ್ಬರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಪದ್ದು‌ ರಾಠೋಡ ಎಂಬುವವರ ಎದೆಗೆ ಒಂದು ಗುಂಡು ತಗುಲಿದ್ದು, ತೀವ್ರವಾಗಿ ಗಾಯಗೊಂಡಿರುವ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಗಂ ತಲಾಬ್‌ ತಾಂಡಾದ ಸಿವಿಲ್‌ ಗುತ್ತಿಗೆದಾರ ಅಶೋಕ ರಾಠೋಡ ಎಂಬುವವರ ಕೈಗೆ ಚಾಕುವಿನಿಂದ ಇರಿಯಲಾಗಿದೆ.

ಪ್ರಕರಣದ ಸಂಬಂಧ ಮನಗೂಳಿ ಅಗಸಿಯ ತುಳಸಿರಾಮ ಹರಿಜನ ಮತ್ತು ವಿಕಾಸ ಹಾಗೂ ಇನ್ನಿಬ್ಬರು ಆರೋಪಿಗಳ ವಿರುದ್ಧ ಜಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್‌ ಮುಖಂಡ ಮಹಾದೇವ ಬೈರಗೊಂಡ ಮೇಲೆ ನಡೆದ ಶೂಟ್‌ಔಟ್‌ ಪ್ರಕರಣದ ಬೆನ್ನೆಲ್ಲೇ ನಗರದಲ್ಲಿ ಮತ್ತೊಂದು ಶೂಟ್‌ಔಟ್‌ ಪ್ರಕರಣ ನಡೆದಿರುವುದು ಜನರನ್ನು ಆತಂಕ್ಕೆ ದೂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು