ಭಾನುವಾರ, ಫೆಬ್ರವರಿ 28, 2021
20 °C
ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

ಪಿಂಜಾರ ಅಭಿವೃದ್ಧಿ ನಿಗಮ ರಚನೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನದಾಫ/ಪಿಂಜಾರ ಅಭಿವೃದ್ಧಿ ನಿಗಮ ಮಂಡಳಿ ರಚನೆ ಆಗ್ರಹಿಸಿ ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದಿಂದ ಮುಖ್ಯಮಂತ್ರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಎಂ.ಕೆ.ನದಾಫ್‌ ಮಾತನಾಡಿ, ನದಾಫ, ಪಿಂಜಾರ ಜನಾಂಗವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದವರಾಗಿದ್ದು, ಸಮಾಜದ ಸರ್ವೋತ್ತೋಮುಖ ಅಭಿವೃದ್ಧಿಗಾಗಿ ಸರ್ಕಾರವು ನಿಗಮ, ಮಂಡಳಿ ರಚಿಸುವ ಅವಶ್ಯತೆ ಇದೆ ಎಂದರು.

ಹಲವಾರು ವರ್ಷಗಳಿಂದ ನಿರಂತರವಾಗಿ ಈ ಬೇಡಿಕೆಗಳನ್ನು ಪೂರೈಸಲು ವಿನಂತಿಸುತ್ತಾ ಬಂದಿದ್ದರೂ ಇದುವರೆಗೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ನದಾಫ್‌ ಮತ್ತು ಪಿಂಜಾರ ಸಮಾಜ ಅತಿ ಹಿಂದುಳಿದ ಸಮಾಜವಾಗಿದ್ದು, ಈ ಸಮಾಜದಲ್ಲಿ ಶೇ 95 ರಷ್ಟು ಜನ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸರ್ಕಾರದ ಯೋಜನೆಗಳು ಸಮಾಜಕ್ಕೆ ಸರಿಯಾಗಿ ತಲುಪುತ್ತಿಲ್ಲ ಎಂದು ಹೇಳಿದರು.

ಒಂದು ವೇಳೆ ನಮ್ಮ ಬೇಡಿಕೆ ಕಡೆಗಣಿಸಿದಲ್ಲಿ ರಾಜ್ಯದಾದ್ಯಂತ ಧರಣಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ವಕೀಲರಾದ ಮೀರಾ ನದಾಫ್‌, ಅಯೂಬ್‌ಖಾನ್‌ ಪಿ. ನದಾಫ್‌, ಪರೀದ ಮೌಲಾಸಾಬ ನದಾಫ್‌, ಪೀರಸಾಬ್‌ ಅಮೀನಸಾಬ್‌ ನದಾಫ್‌, ಮೈಹಿಬೂಬ್‌ ರುಕ್ಮೋದ್ದೀನ್‌ ಹತ್ತಳ್ಳಿ, ಮೌಲಾಸಾಬ್‌ ನದಾಫ್‌, ಮಕ್ತುಮಸಾಬ್‌ ನದಾಫ್‌, ದಾವಲಮಲೀಕ್‌ ನದಾಫ್‌, ರಾಜಾಭಕ್ಷಿ ನದಾಫ್‌, ಅಲ್ಲಿಸಾಬ್‌ ನದಾಫ್‌, ಇಸ್ಮಾಯಿಲಸಾಬ್‌ ನದಾಫ್‌, ಡಾ. ಬಂದೇನವಾಜ್‌ ಕೊರಬು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು