ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ: ಗಬಸಾವಳಗಿ ಉಪವಾಸ ಸತ್ಯಾಗ್ರಹ ಅಂತ್ಯ

Published 26 ಮಾರ್ಚ್ 2024, 15:25 IST
Last Updated 26 ಮಾರ್ಚ್ 2024, 15:25 IST
ಅಕ್ಷರ ಗಾತ್ರ

ಸಿಂದಗಿ: ಗಬಸಾವಳಗಿ ಮತ್ತು ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲ್ಲೂಕಿನಲ್ಲಿ ಮರು ಸೇರ್ಪಡೆ ಮಾಡುವಂತೆ ಆಗ್ರಹಿಸಿ ಪ್ರಾರಂಭಿಸಿದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಎರಡನೆಯ ದಿನ ಮಂಗಳವಾರ ಅಂತ್ಯಗೊಂಡಿತು.

ಶಾಸಕ ಅಶೋಕ ಮನಗೂಳಿ ಸತ್ಯಾಗ್ರಹ ನಡೆಸಿದ್ದ ಸ್ಥಳಕ್ಕೆ ಬಂದು ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.

ಶಾಂತಗೌಡ ಬಿರಾದಾರ ಮಾತನಾಡಿ, ‘ಶಾಸಕರ ಮೇಲೆ ವಿಶ್ವಾಸವಿಟ್ಟು ಉಪವಾಸ ಸತ್ಯಾಗ್ರಹ ಹಿಂದಕ್ಕೆ ಪಡೆಯುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೆ ನಾನು ಬರಿಗಾಲಿನಲ್ಲೇ ನಡೆಯುವೆ’ ಎಂದು ಶಪಥ ಮಾಡಿದರು. ಇದೇ ಶಪಥಕ್ಕೆ ಬಂಗಾರೆಪ್ಪಗೌಡ ಬಿರಾದಾರ ಕೂಡ ಸಮ್ಮತಿಸಿದರು.

ಶಾಸಕರು ಸತ್ಯಾಗ್ರಹ ನಿರತರಿಗೆ ಎಳೆ ನೀರು ಕುಡಿಸಿ ಸತ್ಯಾಗ್ರಹಕ್ಕೆ ಅಂತ್ಯ ಹಾಡಿದರು. ಗಂಗಪ್ಪಗೌಡ ಬಿರಾದಾರ, ಸಾಹೇಬಗೌಡ ಬಿರಾದಾರ, ಅಪ್ಪಾಸಾಹೇಗೌಡ ಬಿರಾದಾರ, ಬಾಬಾಗೌಡ ಬಿರಾದಾರ, ಪ್ರಭುಗೌಡ ಬಿರಾದಾರ, ಶಿವಶರಣ ಹೆಳವರ, ಬಸನಗೌಡ ಬಿರಾದಾರ, ಮಲ್ಲಿಕಾರ್ಜುನ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT