ಮುದ್ದೇಬಿಹಾಳ: ‘ಮಕ್ಕಳ ಕೈಯ್ಯಲ್ಲಿ ಮೊಬೈಲ್ ಕೊಡದೇ ಪುಸ್ತಕ ಕೊಟ್ಟರೆ ಅವರ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಲೊಟಗೇರಿಯ ಗುರುಮೂರ್ತಿ ಕಣಕಾಲಮಠ ಸ್ವಾಮೀಜಿ ಹೇಳಿದರು.

ಪಟ್ಟಣದ ಎಸ್.ಎಸ್.ಶಿವಾಚಾರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಸ್ಕೂಲ್ ಹಾಗೂ ಚಾಲೆಂಜ್ ನವೋದಯ ಕೋಚಿಂಗ್ ಕ್ಲಾಸಸ್ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾನ್ವೇಷಣೆ ಪರೀಕ್ಷೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಾಲಕರು ಮಕ್ಕಳ ಚಟುವಟಿಕೆ ಬಗ್ಗೆ ಸದಾ ಆಲೋಚನೆ, ಅವಲೋಕನ ಮಾಡುತ್ತಿರಬೇಕು’ ಎಂದರು.

ಶರಣ ಸೋಮನಾಳದ ಮಹದೇವಯ್ಯ ಶಾಸ್ತ್ರಿ ಮಾತನಾಡಿ, ‘ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಭವಿಷ್ಯದ ಪರೀಕ್ಷೆಗಳಿಗೆ ದಾರಿದೀಪವಾಗುತ್ತವೆ’ ಎಂದರು.

ಆಲೂರಿನ ವೇ.ಸಂಗಯ್ಯ ಹಿರೇಮಠ, ದುರ್ಗಾಪರಮೇಶ್ವರಿ ಆಶ್ರಮದ ಲಾಲಲಿಂಗೇಶ್ವರ ಶರಣರು, ಮಾವಿನಬಾವಿಯ ಶರಣ ಬಸವರಾಜ ಹೆಳವರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು, ವಿವಿಧ ಶಾಲೆಗಳ ಶಿಕ್ಷಕರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಎಸ್.ಎಸ್.ಶಿವಾಚಾರ್ಯ ಕಾಲೇಜಿನ ಆಡಳಿತಾಧಿಕಾರಿ ರವಿ ನಾಯಕ, ಪಶು ಆಸ್ಪತ್ರೆಯ ವೈದ್ಯ ಡಾ.ಸುರೇಶ ಭಜಂತ್ರಿ, ಕೋಚಿಂಗ್ ಕ್ಲಾಸಸ್ನ ಅಧ್ಯಕ್ಷ ವೀರೇಶ ಹವಾಲ್ದಾರ, ಸಂಚಾಲಕಿ ವಿಜಯಲಕ್ಷ್ಮಿ ಹವಾಲ್ದಾರ, ವೀರೇಶ ಗುರುಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.