ಗುಳೇದಗುಡ್ಡ : ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಸಮಸ್ತ ಬಸವಪರ ಸಂಘಟನೆಗಳ ಆಶ್ರಯದಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚಾರ ಆರಂಭಿಸಿರುವ ಬಸವ ಸಂಸ್ಕೃತಿ ಅಭಿಯಾನ ಇದೇ ಸೆ.10ರಂದು ಬಾಗಲಕೋಟೆಗೆ ಆಗಮಿಸಲಿದೆ. ಈ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಲಿಂಗಾಯತ ಸಮಾಜದ ಜನರು ಆಗಮಿಸಬೇಕೆಂದು ನಿಡಸೋಶಿ ಸಿದ್ದ ಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಶ್ರೀಗಳು ಇಲ್ಲಿ ಹೇಳಿದರು.

ಅವರು ಪಟ್ಟಣದ ಗುರುಸಿದ್ದೇಶ್ವರ ಬ್ರಹನ್ಮಠದ ಸಭಾಭವನದಲ್ಲಿ ಸೋಮವಾರ ನಡೆದ ಎಲ್ಲ ಸಮಾಜಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ಬೆಳಿಗ್ಗೆ 10:30ಕ್ಕೆ ಬಸವ ಸಂಸ್ಕೃತಿ ರಥಯಾತ್ರೆ ಆಗಮಿಸಲಿದ್ದು, ಧ್ವಜಾರೋಹಣ ನಡೆಯಲಿದೆ. ನಂತರ ವಚನ ಸಂವಾದ, ಸಾಮರಸ್ಯ ನಡಿಗೆ, ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ರಾಮೇಶ್ವರ ಮಹಾಸ್ವಾಮಿಗಳು ಮಾತನಾಡಿ, ಬಸವ ತತ್ವವನ್ನು ಒಪ್ಪಿಕೊಳ್ಳುವವರು, ಬಸವಣ್ಣನವರ ಅನುಯಾಯಿಗಳು ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ಇಳಕಲ್ನ ಗುರುಮಹಾಂತ ಶ್ರೀಗಳು ಮಾತನಾಡಿದರು. ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಪಟ್ಟದಾರ್ಯ ಶ್ರೀಗಳು, ಗುರುಸಿದ್ದ ಪಟ್ಟದಾರ್ಯ ಮಹಾಸ್ವಾಮಿಗಳು, ಇರಕಲ್ ಮಠದ ಬಸವಪ್ರಸಾದ ಶರಣರು ಸಾನಿಧ್ಯ ವಹಿಸಿ ಮಾತನಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಅಶೋಕ ಬರಗುಂಡಿ, ಪ್ರಧಾನ ಕಾರ್ಯದರ್ಶಿ ರವಿ ಯಡಹಳ್ಳಿ, ರಾಚಣ್ಣ ಕೆರೂರ, ಬಸವರಾಜ ಅನಗವಾಡಿ, ಮುಖಂಡರಾದ ಸಂಜಯ ಬರಗುಂಡಿ, ಹನಮಂತ ಮಾವಿನಮರದ, ಸಂಗಪ್ಪ ಹಡಪದ, ಸಂಗನಬಸಪ್ಪ ಚಿಂದಿ, ಚಂದ್ರಶೇಖರ ಹರವಿ, ಸಿದ್ಲಿಂಗಪ್ಪ ಬರಗುಂಡಿ, ಮುಪ್ಪಣ್ಣ ಶೀಲವಂತ, ಬಸವರಾಜ ಬರಗುಂಡಿ, ಶಿವಾನಂದ ಎಣ್ಣಿ ಹಾಗೂ ಪಟ್ಟಣದ ಅನೇಕ ಸಮಾಜಗಳ ಮುಖಂಡರು, ಹಿರಿಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.