ಶುಕ್ರವಾರ, ಸೆಪ್ಟೆಂಬರ್ 25, 2020
24 °C

ವಿಜಯಪುರ: ಧಾರಾಕಾರ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸೋಮವಾರ ಧಾರಾಕಾರ ಮಳೆ ಸುರಿಯಿತು.

ವಿಜಯಪುರ ನಗರದಲ್ಲಿ ಮಧ್ಯಾಹ್ನ ಮತ್ತು ಸಂಜೆ ಭಾರೀ ಮಳೆ ಸುರಿಯಿತು. ಉಳಿದಂತೆ ಸಿಂದಗಿಯಲ್ಲಿ ಉತ್ತಮ ಮಳೆಯಾಗಿದೆ. ಮುದ್ದೇಬಿಹಾಳ, ಇಂಡಿ, ತಾಂಬಾದಲ್ಲಿ ಜಿಟಿಜಿಟಿ ಮಳೆಯಾಗಿದೆ.

ಬಸವನಬಾಗೇವಾಡಿ 1.8, ಆಲಮಟ್ಟಿ 0.8, ಭೂತನಾಳ 1.6, ಮಮದಾಪೂರ 2.2, ಅಗರಖೇಡ 1.1, ಚಡಚಣ 2, ಝಳಕಿ 2.7, ರಾಮನಹಳ್ಳಿ 4.6 ಮಿ.ಮೀ. ಮಳೆಯಾಗಿದೆ.

ಜಿಲ್ಲೆಯಲ್ಲಿ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಹೊಲದಲ್ಲಿ ಬೆಳೆಗೆ ಅನಾನುಕೂಲವಾಗಿದೆ. ತಗ್ಗು ಪ್ರದೇಶದ ಹೊಲದಲ್ಲಿ ನೀರು ನಿಂತ ಪರಿಣಾಮ ಕೊಳೆಯುವ ಸಾಧ್ಯತೆ ಇರುವುದಾಗಿ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು