ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಕಾಲೇಜು ಮಂಜೂರು ಸಂತಸ ತಂದಿದೆ: ಮನಗೂಳಿ

Published 16 ಫೆಬ್ರುವರಿ 2024, 14:11 IST
Last Updated 16 ಫೆಬ್ರುವರಿ 2024, 14:11 IST
ಅಕ್ಷರ ಗಾತ್ರ

ಸಿಂದಗಿ: ರಾಜ್ಯದ ತೋಟಗಾರಿಕೆ ಸಚಿವರಾಗಿದ್ದ ನನ್ನ ತಂದೆ ದಿವಂಗತ ಎಂ.ಸಿ.ಮನಗೂಳಿ ಅವರ ಕನಸಿನ ಕೂಸು ಆಲಮೇಲ ತೋಟಗಾರಿಕೆ ಕಾಲೇಜಿಗೆ ಮಂಜೂರಾತಿ ಪ್ರಸ್ತುತ ಬಜೆಟ್ ನಲ್ಲಿ ಘೋಷಣೆಯಾಗಿರುವುದು ಅಪಾರ ಸಂತಸ ತರಿಸಿದೆ. ಮತಕ್ಷೇತ್ರದ ಜನತೆಯ ಬಹು ವರ್ಷಗಳ ಬೇಡಿಕೆ ಈಗ ಈಡೇರಿದಂತಾಗಿದೆ. ಸಮಸ್ತ ಜನತೆಯ ಪರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.

ಬಜೆಟ್ ಘೋಷಣೆಗೊಂಡ ನಂತರ ಶಾಸಕರು ದೂರವಾಣಿ ಮೂಲಕ 'ಪ್ರಜಾವಾಣಿ ಪ್ರತಿನಿಧಿ' ಜೊತೆಗೆ ಮಾತನಾಡಿ, ಬೃಹತ್ ಐದು ಗ್ಯಾರಂಟಿಗಳ ಆರ್ಥಿಕ ಹೊರೆ ಮಧ್ಯೆದಲ್ಲಿಯೂ ಸಾಮಾಜಿಕ ನ್ಯಾಯದಡಿ ರಾಜ್ಯದ ಜನತೆ ಮೆಚ್ಚುವಂತಹ ಎಲ್ಲ ರಂಗಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಇದೊಂದು ಕರ್ನಾಟಕ ಮಾದರಿ ಅಭಿವೃದ್ದಿಯ ಹೊಸ ಹೆಜ್ಜೆಯ ಬಜೆಟ್ ಆಗಿದೆ. ವಿಶೇಷವಾಗಿ ವಿಜಯಪುರ ಜಿಲ್ಲೆಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಮನಗೂಳಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT