ಇಂಡಿ: ತಾಲ್ಲೂಕಿನ ಕಬ್ಬು ಬೆಳೆಗಾರರು ಕಬ್ಬಿಗೆ ದರ ನಿಗದಿಪಡಿಸಿ ಕಾರ್ಖಾನೆ ಪ್ರಾರಂಭಿಸಬೇಕೆಂದು ಆಗ್ರಹಿಸಿ, ಇಂಡಿ ತಾಲ್ಲೂಕಿನ ನಾದ (ಕೆಡಿ) ಗ್ರಾಮದಲ್ಲಿ ಹೋರಾಟ ಮುಂದುವರೆದಿದೆ.

ಶನಿವಾರ ಇಂಡಿ ಸಿಂದಗಿ ರಸ್ತೆಯ ಮಧ್ಯದಲ್ಲಿರುವ ನಾದ ಕೆಡಿ ಗ್ರಾಮದ ಬಳಿ ಹೋರಾಟಗಾರರು ಮತ್ತೆ ರಸ್ತೆ ಬಂದು ಮಾಡಿ ಪ್ರತಿಭಟನೆ ಮಾಡಿದರು.
ಇದರಿಂದ ಯಾವದೇ ವಾಹನಗಳು ಚಲಿಸಲಿಲ್ಲ. ಇಂಡಿಯಿಂದ ಸಿಂದಗಿ, ಆಲಮೇಲ, ಕಲಬುರಗಿ, ಹೈದ್ರಾಬಾದ್ಗಳಿಗೆ ಯಾವುದೇ ವಾಹನಗಳು ಹೋಗದೆ ಪ್ರಯಾಣಿಕರಿಗೆ ಅತೀವ ತೊಂದರೆಯಾಯಿತು.

ಹೋರಾಟ ಸಮಿತಿಯ ನೇತೃತ್ವ ವಹಿಸಿದ್ದ ಬಾಳು ಮುಳಜಿ ಮಾತನಾಡಿ, ಕಾರ್ಖಾನೆಯವರು ಕೂಡಲೇ ದರ ನಿಗದಿ ಪಡಿಸಿ ಜಿಲ್ಲಾಧಿಕಾರಿಗಳಿಗೆ ಕೊಡಬೇಕು. ಇಲ್ಲದಿದ್ದರೆ ಕಾರ್ಖಾನೆ ಮುಂದೆ ಹೋರಾಟ ಇನ್ನಷ್ಟು ತೀರ್ವಗೊಳಿಸಲಾಗುವದು ಎಂದರು. ಬೆಲೆ ನಿಗದಿಪಡಿಸದಿದ್ದರೆ ಹೋರಾಟ ನಿಲ್ಲುವುದಿಲ್ಲ ಎಂದರು.

ನಾದ ಗ್ರಾಮದ ಎಸ್.ಟಿ.ಪಾಟೀಲ, ಸಿದ್ದು ತಳವಾರ, ಎಂ.ಎಸ್.ಮುಲ್ಲಾ, ಕಲ್ಯಾಣಿ ಹಿಟ್ನಳ್ಳಿ, ಶ್ರೀಮಂತ ಖಸ್ಕಿ, ಶ್ರೀಶೈಲ ಮದರಿ, ಯಲ್ಲು ಹಳ್ಳಿ, ಸಂಗಣ್ಣ ದೇವರಮನಿ, ಸುರೇಶ ಪಾಟೀಲ, ವಿಠ್ಠಲ ಬಿರಾದಾರ, ಅಜೀಜ ದೇಸಾಯಿ, ಶಂಕರಗೌಡ ಬಂಡಿ, ಅಂಬುರಾಯ ಕವಟಗಿ, ಹಣಮಂತ ಬಿಸನಾಳ, ಸಂಗಮೇಶ ಪಾಸೋಡಿ, ರಾಜು ದೇವರಮನಿ, ರವಿ ರೋಡಗಿ, ಶೇಖರ ಮಂದೋಲಿ,ಮಲ್ಲನಗೌಡ ಬಿರಾದಾರ, ಪ್ರದೀಪ ಬೊರುಟಗಿ, ಕಾಂತು ನಾದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.