ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿ: ಬರ ಪರಿಹಾರದ ಹಣ ರೈತರ ಖಾತೆಗೆ ಜಮಾ

Published 16 ಮೇ 2024, 13:29 IST
Last Updated 16 ಮೇ 2024, 13:29 IST
ಅಕ್ಷರ ಗಾತ್ರ

ಇಂಡಿ: ತಾಲ್ಲೂಕಿನಲ್ಲಿ ಒಟ್ಟು 42,320 ರೈತರಿಗೆ ₹64.71 ಕೋಟಿ ಮಂಜೂರಾಗಿದ್ದು, ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.

ಕೆಲವು ರೈತರ ಖಾತೆಗಳು ಸ್ಥಗಿತಗೊಂಡಿವೆ. ಆಧಾರ್‌ ಕಾರ್ಡ್ ಬ್ಯಾಂಕ್ ಖಾತೆಗಳಿಗೆ ಲಿಂಕ್ ಇಲ್ಲದಿರುವುದು, ಕೆಲವು ರೈತರ ಹೆಸರುಗಳು ಬ್ಯಾಂಕ್ ಖಾತೆಯಲ್ಲಿ ಮತ್ತು ಆಧಾರ್‌ ಕಾರ್ಡಗಳಲ್ಲಿ ಬೇರೆ ಬೇರೆಯಾಗಿರುವುದು, ಎನ್‌ಪಿಸಿಐ ಮಾಡಿಸದಿರುವುದು, ಇಂತಹ ಸಮಸ್ಯೆಗಳಿಂದ ಒಟ್ಟು ತಾಲ್ಲೂಕಿನಲ್ಲಿ 3266 ರೈತರ ಖಾತೆಗಳಿಗೆ ಪರಿಹಾರದ ಹಣ ಜಮಾ ಆಗಿಲ್ಲ. ಈ ಬಗ್ಗೆ ರೈತರು ಭಯ ಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಅಕಾಲಿಕ ಮಳೆ–ಗಾಳಿಯಿಂದ ಬೆಳೆ ಹಾನಿ:

ತಾಲ್ಲೂಕಿನಲ್ಲಿ ಕಳೆದ 2 ದಿವಸಗಳ ಹಿಂದೆ ಅಕಾಲಿಕ ಮಳೆ ಮತ್ತು ಗಾಳಿಯಿಂದ ಹಳಗುಣಕಿ, ಹೊರ್ತಿ, ಹಿರೇಬೇವನೂರ, ಮೆಹರುನಗರ, ಚಿಕ್ಕಬೇವನೂರ, ಇಂಡಿ, ದೇಗಿನಾಳ, ಮಸಳಿ ಕೆಡಿ, ಬಸನಾಳ, ಆಳೂರ, ಲಚ್ಯಾಣ, ಬೈರುಣಗಿ ಮತ್ತು ಬೂದಿಹಾಳ ಗ್ರಾಮಗಳಲ್ಲಿ 1 ಹೆಕ್ಟೇರ್ ದ್ರಾಕ್ಷಿ, 1 ಹೆಕ್ಟೇರ್ ದಾಳಿಂಬೆ, 10.05 ಹೆಕ್ಟೇರ್ ಲಿಂಬೆ, 2.40 ಹೆಕ್ಟೇರ್ ಬಾಳೆ ಬೆಳೆಗೆ ಹಾನಿಯಾಗಿದ್ದು, ಒಟ್ಟು ಸುಮಾರು ₹3 ಲಕ್ಷ ಹಾನಿಯಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಕಳಿಸಿಕೊಡಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT