ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆ; ಮಾರ್ಚ್‌ 21ರ ವರೆಗೆ ನೀರು

ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯ
Last Updated 13 ನವೆಂಬರ್ 2020, 11:14 IST
ಅಕ್ಷರ ಗಾತ್ರ

ವಿಜಯಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗಳಿಗೆ ವಾರಾಬಂದಿ ಪದ್ಧತಿಗೆಒಳಪಟ್ಟು 2021 ರ ಮಾರ್ಚ್‌ 21 ರ ವರೆಗೆ 120 ದಿನಗಳಲ್ಲಿ 71 ದಿನ ನೀರು ಹರಿಸಲುಶುಕ್ರವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯಿಸಿತು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಆಲಮಟ್ಟಿಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಇಂದಿನ ನೀರಿನ ಸಂಗ್ರಹದ ಆಧಾರದ ಮೇಲೆ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಕ್ಕೆ ಪ್ರತ್ಯೇಕ ವಾರಾಬಂಧಿ ಅಳವಡಿಸಿ ನೀರು ಹರಿಸಲುತೀರ್ಮಾನಿಸಲಾಯಿತು ಎಂದು ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ನಾರಾಯಣಪುರ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ 14 ದಿನ ಚಾಲು, 8 ದಿನ ಬಂದ್ ವಾರಾಬಂಧಿಪದ್ಧತಿ, ಆಲಮಟ್ಟಿ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ 8 ದಿನ ಚಾಲು 7 ದಿನ ಬಂದ್ವಾರಾಬಂದಿ ಷರತ್ತಿಗೆ ಒಳಪಟ್ಟು ನೀರು ಹರಿಸಬೇಕು, ಇದನ್ನು ಗಮನದಲ್ಲಿಟ್ಟುಕೊಂಡುರೈತರು ಬೆಳೆ ಬೆಳೆಯಬೇಕು ಎಂದು ಕಾರಜೋಳ ತಿಳಿಸಿದರು.

ನೀರಿನ ಸಂಗ್ರಹ:

ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಮುಂಗಾರು ಹಂಗಾಮಿಗೆ ನ.17 ರ ವರೆಗೆ ನೀರುಒದಗಿಸಿದ ನಂತರ ಎರಡು ಜಲಾಶಯಗಳಲ್ಲಿ ಬಳಕೆಗೆ 116.33 ಟಿಎಂಸಿ ಅಡಿ ನೀರುಸಂಗ್ರಹವಿದೆ. ಜೂನ್ 2021 ರವರೆಗೆ ಕುಡಿಯುವ ನೀರು, ಭಾಷ್ಪಿಭವನ, ಕೈಗಾರಿಕೆ, ಕೆರೆಭರ್ತಿ, ಚಿಕ್ಕಪಡಸಲಿ, ಗಲಗಲಿ ಬ್ಯಾರೇಜ್ ಭರ್ತಿ, ಹಿನ್ನೀರಿನ ಬಳಕೆ ಸೇರಿ ಒಟ್ಟಾರೆ 38.80 ಟಿಎಂಸಿ ಅಡಿ ನೀರು ಅಗತ್ಯ. ಹೀಗಾಗಿ ಕಾಲುವೆಗೆ ನೀರು ಸುಮಾರು 77.53 ಟಿಎಂಸಿಅಡಿ ನೀರು ಹರಿಸಬಹುದು, ನಿತ್ಯ ಎರಡು ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ನೀರುಹರಿಸಿದರೆ 1.06 ಟಿಎಂಸಿ ಅಡಿ ನೀರು ಅಗತ್ಯ, ಇದರ ಆಧಾರದ ಮೇಲೆ ಒಟ್ಟಾರೇ 71 ದಿನ ನೀರು ಹರಿಸಬಹುದು, ಅದಕ್ಕಾಗಿ ಕಟ್ಟುನಿಟ್ಟಿನ ವಾರಾಬಂಧಿಗೆ ಅನುಗುಣವಾಗಿ ಮಾ.21 ರವರೆಗೆ ನೀರು ಹರಿಸಲಾಗುವುದು ಎಂದು ಅವರು ತಿಳಿಸಿದರು.

ಈ ಬಾರಿ ಮಳೆ ಉತ್ತಮವಾಗಿದ್ದು, ಮುಂಗಾರು ಹಂಗಾಮಿನಲ್ಲಿ ಕಾಲುವೆಗೆ ನಿತ್ಯ ನೀರುಹರಿಸಲಾಗಿದೆ. ಆದರೆ, ಹಿಂಗಾರು ಹಂಗಾಮಿಗೆ ಮಾತ್ರ ವಾರಾಬಂಧಿ ಅಳವಡಿಸಲಾಗುತ್ತಿದೆ. ಇದುಅನಿವಾರ್ಯ. ಮಾ 21 ರ ನಂತರ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಿದ್ದರೆ ಮತ್ತೊಮ್ಮೆಸಭೆ ಕರೆದು ಮತ್ತೊಂದಿಷ್ಟು ದಿನ ನೀರು ಹರಿಸಲಾಗುವುದು ಎಂದು ತಿಳಿಸಿದರು.

ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ವೀರಣ್ಣ ಚರಂತಿಮಠ, ವೆಂಕಟರೆಡ್ಡಿ ಮುದ್ನಾಳ, ಎಂ.ಸಿ. ಮನಗೂಳಿ, ದೇವಾನಂದ ಚವ್ಹಾಣ, ಸೋಮನಗೌಡ ಪಾಟೀಲ, ನರಸಿಂಹ ನಾಯಕ, ಶರಣಬಸಪ್ಪಗೌಡ ದರ್ಶನಾಪುರ, ಡಿ.ಎಸ್. ಹೂಲಗೇರಿ, ಶಿವನಗೌಡ ಪಾಟೀಲ, ಬಸನಗೌಡ ದದ್ದಲ್,ಅಮರೇಶಗೌಡ ಪಾಟೀಲ, ಬಸವರಾಜ ಪಾಟೀಲ ಇಟಗಿ, ಸಂಸದರಾದ ರಮೇಶ ಜಿಗಜಿಣಗಿ, ರಾಜಾ
ಅಮರೇಶ್ವರ ನಾಯಕ, ಕೆಬಿಜೆಎನ್‌ಎಲ್ ಎಂಡಿ ಪ್ರಭಾಕರ ಚಿಣಿ, ಮುಖ್ಯ ಎಂಜಿನಿಯರ್‌ಗಳಾದ ಪ್ರದೀಪ ಮಿತ್ರ, ಸುರೇಶ ಎಚ್, ಜಿಲ್ಲಾಧಿಕಾರಿ ಸುನಿಲಕುಮಾರ ಸೇರಿದಂತೆ ಹಲವರುಸಭೆಯಲ್ಲಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT