ಜೆಡಿಎಸ್ ಪ್ರಸ್ತಾಪಿಸುತ್ತಿರುವ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲವಾಗಿದೆ. ಮಿತ್ರ ಪಕ್ಷವಾಗಿರುವುದರಿಂದ ಅವರಿಗೆ ಕೇಳುವ ಹಕ್ಕಿದೆ. ಆದರೆಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಜಿಲ್ಲೆ ಎಂಟೂ ಕ್ಷೇತ್ರಗಳು ಎನ್‌ಡಿಎ ಪಾಲಾಗುವುದು
ನಿಶ್ಚಿತ ಗುರುಲಿಂಗಪ್ಪ ಅಂಗಡಿ ಅಧ್ಯಕ್ಷ ಜಿಲ್ಲಾ ಘಟಕ ಬಿಜೆಪಿ ವಿಜಯಪುರ
ನಾಗಠಾಣ ದೇವರಹಿಪ್ಪರಗಿ ಬಸವನ ಬಾಗೇವಾಡಿ ಇಂಡಿ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಉತ್ತಮ ಅವಕಾಶವಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು
ನಿಖಿಲ್ ಕುಮಾರಸ್ವಾಮಿ ಅಧ್ಯಕ್ಷ ಜೆಡಿಎಸ್ ಯುವ ಘಟಕ
ಬಿಜೆಪಿ ಜೆಡಿಎಸ್ ಎರಡೂ ನಮಗೆ ಸಮಾನ ಎದುರಾಳಿಗಳು. ಎರಡೂ ಪಕ್ಷಗಳು ಒಂದಾಗಿ ಸ್ಪರ್ಧಿಸಿದರೂ ಕಾಂಗ್ರೆಸ್‌ಗೆ ಯಾವುದೇ ಆತಂಕ ಇಲ್ಲ. ಬಿಜೆಪಿಯವರು ಜೆಡಿಎಸ್‌ಗೆ ಎರಡು ಕ್ಷೇತ್ರ ಬಿಟ್ಟುಕೊಡಬಹುದೇ ಹೊರತು ನಾಲ್ಕು ಕ್ಷೇತ್ರ ಕೊಡುವುದು ಅನುಮಾನ
ಮಲ್ಲಿಕಾರ್ಜುನ ಲೋಣಿ ಅಧ್ಯಕ್ಷ ಕಾಂಗ್ರೆಸ್ ಜಿಲ್ಲಾ ಘಟಕ ವಿಜಯಪುರ