ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವ್ಯೆದ್ಯೆ ಅತ್ಯಾಚಾರ, ಹತ್ಯೆ ಖಂಡಿಸಿ ಪ್ರತಿಭಟನೆ

Published : 17 ಆಗಸ್ಟ್ 2024, 16:09 IST
Last Updated : 17 ಆಗಸ್ಟ್ 2024, 16:09 IST
ಫಾಲೋ ಮಾಡಿ
Comments

ಆಲಮೇಲ: ಕೋಲ್ಕತದಲ್ಲಿ ನಡೆದ ಟ್ರೈನಿ ವ್ಯೆದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ, ಭಾರತೀಯ ವ್ಯೆದ್ಯಕೀಯ ಸಂಘದ ಸಿಂದಗಿ, ಆಲಮೇಲ ಶಾಖೆಯ ವ್ಯೆದ್ಯರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕೈಗೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟಿಸಿದರು.

‘ಕರ್ತವ್ಯದಲ್ಲಿರುವಾಗಲೇ ಕೋಲ್ಕತದ ಟ್ರೈನಿ ವ್ಯೆದ್ಯೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಹಂತಕರನ್ನು ಬಂಧಿಸುವಲ್ಲಿ ಪಶ್ಚಿಮ ಬಂಗಾಲದ ಸರ್ಕಾರ ವಿಫಲವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವೆಂದು ಪರಿಗಣಿಸಿ ಅತ್ಯಾಚಾರಿ, ಕೊಲೆಗಡುಕರನ್ನು ಬಂಧಿಸಿ ಗಲ್ಲಿಗೇರಿಸಬೇಕು’ ಎಂದು ಪ್ರತಿಭಟನಾಕಾರಕು ಆಗ್ರಹಿಸಿದರು.

ನಂತರ ಪಾದಯಾತ್ರೆಯ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಸುರೇಶ್ ಚಾವಲರ್ ಅವರಿಗೆ ಮನವಿ ಸಲ್ಲಿಸಿದರು. ಡಾ.ಸಂದೀಪ ಪಾಟೀಲ ಮಾತನಾಡಿ, ‘ಪದೇ-ಪದೇ ವ್ಯೆದ್ಯರ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆಗಳಾಗುತ್ತಿರುವುದು ನಾಚಿಕೆಯ ಸಂಗತಿ, ಸರ್ಕಾರಗಳು ವ್ಯೆದ್ಯರಿಗೆ ಕಾನೂನಿನಡಿ ಸೂಕ್ತ ರಕ್ಷಣೆ ಒದಗಿಸಬೇಕು, ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು’ ಎಂದರು.

ತಹಶೀಲ್ದಾರ್ ಸುರೇಶ ಚಾವಲರ್ ಮನವಿ ಸ್ವೀಕರಿಸಿದರು. ಡಾ. ಮಂಜುಷಾ ಪಾಟೀಲ, ಡಾ.ಪ್ರಮೋದ ಮಹಾಜನ, ಡಾ.ಪವನ ಜೋಶಿ, ಡಾ.ಚಂದ್ರಕಾಂತ ಬಾವಿಕಟ್ಟಿ, ಡಾ.ಬಸವರಾಜ ಬಂಟನೂರ, ಡಾ.ಕರಬಸ್ಸು ತಾಳಿಕೋಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT