ವಿಜಯಪುರ: ಸಮಾಧಾನ, ನೆಮ್ಮದಿ ನೀಡಬೇಕೆಂಬ ಉದ್ದೇಶದಿಂದ ಜೈಲಿನಲ್ಲಿ ಸಾಹಿತ್ಯ ಕಮ್ಮಟ ಏರ್ಪಡಿಸುತ್ತಿದ್ದೇವೆ. ಈ ಕಮ್ಮಟದ ಮೂಲಕ ಕೈದಿಗಳು ವಿವೇಕಿಗಳಾಗಲು ನೆರವಾಗುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ತಿಳಿಸಿದರು.

ನಗರದ ದರ್ಗಾಜೈಲಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕೇಂದ್ರ ಕಾರಾಗೃಹ ಸಹಯೋಗದೊಂದಿಗೆ ಏರ್ಪಡಿಸಿದ್ದ ಸಾಹಿತ್ಯ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.

ಡಾ.ಅಂಬೇಡ್ಕರ್ ಕೊಟ್ಟ ಸಂವಿಧಾನದ ಬಲವಿದೆ. ಸಂವಿಧಾನವೇ ನಿಜವಾದ ಧರ್ಮಗ್ರಂಥ. ಇದರೊಂದಿಗೆ ಅಕ್ಷರಕ್ಕೆ ಬಹಳ ಶಕ್ತಿಯಿದೆ. ಹಾಗೆಯೇ ಪುಸ್ತಕಗಳು ಸದಾ ಕಾಲ ಗೆಳೆಯನಾಗಿ, ಮಾರ್ಗದರ್ಶಕವಾಗಿರುತ್ತವೆ. ಹೀಗಾಗಿ ಕನ್ನಡ ಸಾಹಿತ್ಯ ಒಳ್ಳೆಯ ವಿವೇಕ ಕಲಿಸುತ್ತದೆ ಎಂದು ಹೇಳಿದರು.

ಜಾತಿವಾದಿಗಳಾದವರು, ಕೋಮುವಾದಿಗಳಾದವರು ಸರಿಯಾಗಿ ಕನ್ನಡ ಸಾಹಿತ್ಯ ಅರ್ಥೈಸಿಕೊಳ್ಳದಿರಲು ಕನ್ನಡ ಅಧ್ಯಾಪಕರು ಕಾರಣ. ಪಂಪ, ರನ್ನ, ಕುಮಾರವ್ಯಾಸ, ಬಸವಣ್ಣ ಮೊದಲಾದವರ ಕೃತಿಗಳನ್ನು ಅರ್ಥೈಸಬೇಕಿತ್ತು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ನಮಗೆ ಜೀವ ಕೊಡಲು ಸಾಧ್ಯವಿಲ್ಲ ಎಂದ ಮೇಲೆ ಇನ್ನೊಬ್ಬರ ಜೀವ ತೆಗೆಯಲು ಸಾಧ್ಯವಿಲ್ಲ. ಇದಕ್ಕಾಗಿ ಸಿಟ್ಟು ತನ್ನ ವೈರಿ ಹಾಗೂ ಶಾಂತಿ ಪರರ ವೈರಿ ಎಂದು ತಿಳಿದಾಗ ಅಪರಾಧ ಚಟುವಟಿಕೆಗಳಿಂದ ದೂರವಿರಲು ಸಾಧ್ಯ ಎಂದರು.

ಹೂವಿನಂತಿದ್ದ ಮಗು ದೊಡ್ಡವನಾದ ಮೇಲೆ ಮುಳ್ಳುಕಂಟಿಯಾಗಬಾರದು. ಇದಕ್ಕಾಗಿ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಸಾಹಿತ್ಯ ಓದಿರಿ ಎಂದು ಸಲಹೆ ನೀಡಿದರು.

ಕೈದಿ ದಾನಯ್ಯ ಹಿರೇಮಠ ಕಮ್ಮಟ ಕುರಿತು ಅನಿಸಿಕೆ ಹಂಚಿಕೊಂಡರು. ಜೈಲಿನ ಅಧೀಕ್ಷಕ ಎಂ.ಎಸ್.ಕೊಟ್ರೇಶ್, ಸಹಾಯಕ ಅಧೀಕ್ಷಕ ಅಭಿಜಿತ್, ಸಾಹಿತಿ ಶಂಕರ ಬೈಚಬಾಳ ಮಾತನಾಡಿದರು. ಕಮ್ಮಟದ ಸಂಚಾಲಕ ಗಣೇಶ ಅಮೀನಗಡ, ಜೈಲಿನ ವಾರ್ಡರ್ ಶಕೀನಾ ನದಾಫ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.