ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ರಾಷ್ಟ್ರೀಯ ಲೋಕ ಅದಾಲತ್: 1,345 ಪ್ರಕರಣಗಳು ಇತ್ಯರ್ಥ

Published 17 ಮಾರ್ಚ್ 2024, 13:04 IST
Last Updated 17 ಮಾರ್ಚ್ 2024, 13:04 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಪಟ್ಟಣದ ನ್ಯಾಯಾಲಯ ಸಂಕೀರ್ಣದ ನಾಲ್ಕು ನ್ಯಾಯಾಲಯಗಳಲ್ಲಿ ಶನಿವಾರ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ಲೋಕ ಅದಾಲತನಲ್ಲಿ 2680 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಯಿತು. ಅದರಲ್ಲಿ 1345 ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಲೋಕ ಅದಾಲತನಲ್ಲಿ ಅಪರಾಧ ಪ್ರಕರಣಗಳು, ಚೆಕ್ ಬೌನ್ಸ್, ವಾಟ್ನಿ ದಾವೆ, ಬ್ಯಾಂಕ್ ಪ್ರಕರಣಗಳು ಸೇರಿದಂತೆ ವಿವಿಧ ಪ್ರಕರಣಗಳನ್ನು ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ಪ್ರಕಾಶ ಅರ್ಜುನ ಬನಸೋಡೆ, ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ತಯ್ಯಾಬ ಸುಲ್ತಾನ, ಸಿವ್ಹಿಲ್ ನ್ಯಾಯಾಧೀಶರಾದ ತೆಜಸ್ವಿನಿ ಸೊಗಲದ, ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶರಾದ ಸೌಮ್ಯ ಹೂಲಿ ಅವರು ರಾಜಿ ಸಂದಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿದರು.

ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ವಕೀಲರಾದ ಬಿ.ಕೆ.ಕಲ್ಲೂರ, ವಿ.ಜಿ.ಕುಲಕರ್ಣಿ, ವಿ.ಬಿ.ಮರ್ತುರ, ಗೋಪಾಲ ಚಿಂಚೋಳಿ, ಎಂ.ಎಸ್.ಗೊಳಸಂಗಿ, ಬಿ.ಪಿ.ಪತ್ತಾರ‌, ರಾಜು ಅಡ್ಡೊಡಗಿ, ಜಿ.ಜಿ.ಬಿಸನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT