ಮುದ್ದೇಬಿಹಾಳ: ಮಾದಿಗ ಒಳಮೀಸಲಾತಿ ಹೋರಾಟ ಸಮಿತಿಯಿಂದ ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸರ್ಕಾರದ ಅಣಕು ಶವಯಾತ್ರೆಗೆ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ಆದರೆ ಪ್ರತಿಭಟನಕಾರರು ಅಂಬೇಡ್ಕರ್ ಸರ್ಕಲ್ನಿಂದ ತಹಶೀಲ್ದಾರ್ ಕಚೇರಿಯವರೆಗೆ ರ್ಯಾಲಿ ನಡೆಸಿದರು.

ವಕೀಲ ಕೆ.ಬಿ. ದೊಡಮನಿ ಮಾತನಾಡಿ, ‘ಆಳುವ ಸರ್ಕಾರಗಳು ಸಾರ್ವಜನಿಕ ನ್ಯಾಯ ಕೊಟ್ಟಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ನಾಯಕ, ಶೋಷಿತ ಸಮುದಾಯದ ಪರ ಎಂದು ಹೇಳುತ್ತಾ ಮೇಲ್ವರ್ಗದ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

‘ನಮ್ಮ ಸಮಾಜದ ಶಾಸಕ, ಸಂಸದರು ಸಮಾಜವನ್ನು ಸರ್ಕಾರಗಳ ಮುಂದೆ ಅಡ ಇಟ್ಟಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಮಾರುತಿ ಸಿದ್ಧಾಪೂರ ಮಾತನಾಡಿ, ‘ಮೀಸಲಾತಿ ಹೆಸರಿನಲ್ಲಿ ಬಲಾಢ್ಯ ಸಮುದಾಯದವರು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ಮುಖಂಡ ದುರಗಪ್ಪ ದೊಡಮನಿ, ‘ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಲು ಬಯಸುವ ನಿಜವಾದ ನಾಯಕರು ಮಾತ್ರ ಹೋರಾಟಕ್ಕೆ ಬರಲಿ’ ಎಂದರು.

ಮುಖಂಡರಾದ ಬಾಲಚಂದ್ರ ಹುಲ್ಲೂರ, ಶೇಖಪ್ಪ ಮಾದರ, ಆನಂದ ಮುದೂರ ಮಾತನಾಡಿದರು. ವಕೀಲ ಪಿ.ಬಿ.ಮ್ಯಾಗೇರಿ ಮನವಿ ಪತ್ರ ಓದಿದರು. ವಕೀಲ ಮಹೇಶ ದೊಡಮನಿ, ರಮೇಶ ತಳವಾರ, ಮಲ್ಲಪ್ಪ ಬಸರಕೋಡ, ನೀಲಪ್ಪ ಸಿದ್ದಾಪೂರ, ಡಿ.ಡಿ.ಯರಝೇರಿ, ಮುತ್ತು ಅಮರಗೋಳ, ಮಾರುತಿ ಧನ್ನೂರ, ಕಾಲಪ್ಪ ಅರ್ಜಿ, ಪ್ರಭು ತಳಗೆ, ಲಕ್ಷ್ಮಣ ಕಾಳಗಿ, ಪರಶು ನಾಗೂರು, ಮುತ್ತು ಸಿದ್ದಾಪೂರ, ಶಂಕ್ರಪ್ಪ ತಂಗಡಗಿ, ಬಸವರಾಜ ಅರಸನಾಳ, ಮಾಯಮ್ಮ ಮಾದರ, ಶಿಲ್ಪಾ ಮಾದರ, ನೀಲಮ್ಮ ಮಾದರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.