ಮುದ್ದೇಬಿಹಾಳ : ‘ನಾಲತವಾಡ ಪಟ್ಟಣದಿಂದ ಮುದ್ದೇಬಿಹಾಳ ಮಾರ್ಗವಾಗಿ ಹುಬ್ಬಳ್ಳಿಗೆ ಆರಂಭಿಸಲಾದ ಬಸ್ ನಾವು ಸ್ಥಗಿತಗೊಳಿಸಿಲ್ಲ. ಮೇಲಾಧಿಕಾರಿಗಳ ಸೂಚನೆಯನ್ನು ಪಾಲಿಸಿದ್ದೇವೆ’ ಎಂದು ಸಾರಿಗೆ ಘಟಕ ವ್ಯವಸ್ಥಾಪಕ ಎ.ಎಚ್.ಮದಭಾವಿ ಹೇಳಿದರು.

ಪಟ್ಟಣದ ಸಾರಿಗೆ ಘಟಕಕ್ಕೆ ತಾಲ್ಲೂಕಿನ ನಾಲತವಾಡ ಪಟ್ಟಣ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳಿಂದ ಮಂಗಳವಾರ ಮನವಿ ಪತ್ರ ಸ್ವೀಕರಿಸಿ ಅವರು ಮಾತನಾಡಿ, ‘ಬೇರೆ ಘಟಕದವರು ನಮ್ಮ ವಿಭಾಗೀಯ ನಿಯಂತ್ರಣಾಧಿಕಾರಿಗಳಿಂದ ಅನುಮತಿ ಪಡೆದು ಬಸ್ ಕಾರ್ಯಾಚರಣೆ ನಡೆಸಬೇಕು ಎಂಬುದು ನಿಯಮ. ಅದನ್ನು ಪಾಲಿಸಿದ್ದಲ್ಲಿ ಬೇರೆಯವರು ಎಷ್ಟು ಬಸ್ ಓಡಿಸಿದರೂ ನಮ್ಮ ಅಭ್ಯಂತರವಿಲ್ಲ. ನಾಲತವಾಡದಿಂದ ಹುಬ್ಬಳ್ಳಿಗೆ ಹೋಗುವ ಬಸ್ ಸಮಯದಲ್ಲಿ ಬದಲಾವಣೆ ಮಾಡುವಂತೆ ತಿಳಿಸಿದ್ದು ಮುದ್ದೇಬಿಹಾಳ ಘಟಕದಿಂದಲೂ ಹುಬ್ಬಳ್ಳಿ ಮಾರ್ಗದಲ್ಲಿ ಬಸ್ ಓಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮಾರ್ಚ್ ಮೊದಲನೇ ವಾರದಿಂದ ಘಟಕದಲ್ಲಿ ಬಸ್ಗಳು, ಸಿಬ್ಬಂದಿ ಲಭ್ಯತೆ ನೋಡಿಕೊಂಡು ಸಾರ್ವಜನಿಕರ ಬೇಡಿಕೆಯಂತೆ ರಾತ್ರಿ ಸಮಯದಲ್ಲಿ ಮುದ್ದೇಬಿಹಾಳ ಘಟಕದಿಂದ ಮಂತ್ರಾಲಯ, ಸೋಲಾಪುರ, ಕಲ್ಬುರ್ಗಿ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಹೇಳಿದರು.

ಸಮಿತಿ ಸಂಚಾಲಕ ಮುತ್ತು ಸ್ಥಾವರಮಠ ಮಾತನಾಡಿ, ನಾಲತವಾಡ ಘಟಕಕ್ಕೆ ಇಬ್ಬರು ಕಂಟ್ರೋಲರ್ನ್ನು ನೇಮಿಸಬೇಕು ಎಂದು ವಿನಂತಿಸಿದ್ದು ಅದಕ್ಕೆ ಘಟಕ ವ್ಯವಸ್ಥಾಪಕರು ಸ್ಪಂದಿಸಿದ್ದಾರೆ. ಹೊಸದಾಗಿ ಮೂರು ಮಾರ್ಗದಲ್ಲಿ ಬಸ್ ಓಡಿಸುವುದಾಗಿ ತಿಳಿಸಿದ್ದು ಅಭಿನಂದನಾರ್ಹ ಎಂದು ಹೇಳಿದರು.

ನಿವೃತ್ತ ಪಿಡಿಒ ಅಯ್ಯಪ್ಪ ಮಲಗಲದಿನ್ನಿ ಮಾತನಾಡಿ, ಆಲೂರದವರೆಗೆ ಓಡಿಸುವ ಬಸ್ನ್ನು ನಾಲತವಾಡ ವಾಯಾ ಮಾಡಬೇಕು. ನಾಲತವಾಡ ಘಟಕಕ್ಕೆ ಒಂದು ಹೆಚ್ಚುವರಿ ಸ್ಥಳೀಯವಾಗಿ ಸಂಚರಿಸುವ ಬಸ್ ನೀಡಬೇಕು ಎಂದು ಒತ್ತಾಯಿಸಿದರು.

ವೀರೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಎಂ.ಬಿ.ಅಂಗಡಿ, ಮುಖಂಡ ಸಂಗಮೇಶ ಪಾಟೀಲ, ಬಸವರಾಜ ಹಂಪನಗೌಡ್ರ, ಶರಣಪ್ಪ ಗಂಗನಗೌಡ್ರ, ಸಂಗಣ್ಣ ಹಾವರಗಿ, ಚಂದ್ರು ಹಂಪನಗೌಡ್ರ, ಅಯ್ಯಪ್ಪ ಮಲಗಲದಿನ್ನಿ,ಪ್ರಕಾಶ ರಾಂಪೂರ,ಸುರೇಶ ದಡ್ಡಿ, ಶಂಕ್ರಣ್ಣ ಜಾಲವಾದಗಿ,ಹಣಮಂತ ಬಸರಕೋಡ,ಸಂಗಣ್ಣ ಮಡಿವಾಳರ,ಪರಸಪ್ಪ ಹಡಪದ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.