ಭಾನುವಾರ, ಸೆಪ್ಟೆಂಬರ್ 26, 2021
27 °C
ಭಾರತೀಯ ರಕ್ಷಣಾ ವ್ಯವಸ್ಥೆ, ಉದ್ಯೋಗವಕಾಶ ಕುರಿತ ಮಾಹಿತಿ ಒಳಗೊಂಡ ಪುಸ್ತಕ

‘ನೀನೂ ರಕ್ಷಕನಾಗು’ ಕೃತಿ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಭಾರತೀಯ ರಕ್ಷಣಾ ವ್ಯವಸ್ಥೆ ಮತ್ತು ಅದರಲ್ಲಿನ ಉದ್ಯೋಗವಕಾಶಗಳ ಕುರಿತಾದ ಮಾಹಿತಿ ನೀಡುವ ಪುಸ್ತಕದ ಕೊರತೆ ಕನ್ನಡ ಭಾಷೆಯಲ್ಲಿ ಕಾಣುತ್ತಿತ್ತು. ಕ್ಯಾಪ್ಟನ್ ಆನಂದ ಅವರ ‘ನೀನೂ ರಕ್ಷಕನಾಗು’  ಪುಸ್ತಕ ಈ ಕೊರತೆಯನ್ನು ನೀಗಿಸಿದೆ ಎಂದು ಕಮಾಂಡರ್‌ ಅರವಿಂದ ಶಿಗ್ಗಾಂವಿ ಅವರು ಹೇಳಿದರು.

ನಗರದ ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಆನಂದ ರಚಿತ ‘ನೀನೂ ರಕ್ಷಕನಾಗು’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಯಾವುದೇ ಹುದ್ದೆಯಲ್ಲಿದ್ದರೂ ನಮಗೆ ಮೊದಲ ಗುರುತೆಂದರೆ ಭಾರತೀಯ ಎನ್ನುವುದು. ಹೀಗಾಗಿ ಪ್ರತಿಯೊಬ್ಬ ಭಾರತೀಯನಲ್ಲಿಯೂ ಕೂಡ ದೇಶಾಭಿಮಾನ ಜಾಗೃತವಾಗಬೇಕು ಎಂದರು.

ವಿದ್ಯಾರ್ಥಿಗಳಲ್ಲಿ ದೇಶ ಮತ್ತು ದೇಶದ ರಕ್ಷಣಾ ಕ್ಷೇತ್ರದಲ್ಲಿ ಇರುವ ಅವಕಾಶಗಳ ಕುರಿತು ಮಾಹಿತಿ ಒದಗಿಸಿ, ವಿದ್ಯಾರ್ಥಿಗಳನ್ನು ಸೈನ್ಯಕ್ಕೆ ಸೇರುವಂತೆ ಪ್ರೇರಣೆ ನೀಡುವ ಕಾರ್ಯವನ್ನು ಮಾಡುತ್ತಿರುವ ಚಾಣಕ್ಯ ಪ್ರಕಾಶನದ ಸೇವೆ ಅತ್ಯಮೂಲ್ಯವಾಗಿದ್ದು. ಇಂತಹ ಮಹತ್ತರ ಕಾರ್ಯದ ಮುಂದುವರಿದ ಭಾಗವಾಗಿ ಹೊರಹೊಮ್ಮುತ್ತಿರುವ ಈ ಪುಸ್ತಕದ ಜ್ಞಾನವನ್ನು ಯುವಕರು ಬಳಸಿಕೊಳ್ಳಬೇಕು ಎಂದು ಹೇಳಿದರು.

ಪುಸ್ತಕ ಪರಿಚಯಿಸಿ ಮಾತನಾಡಿದ ನಿವೃತ್ತಿ ಕರ್ನಲ್ ಭೀಮಾಶಂಕರ ಹಿಪ್ಪರಗಿ, ಕರ್ನಾಟಕಕ್ಕೆ ವಿಶಿಷ್ಟವಾದ ಕೊಡುಗೆ ನೀಡಿದ ವಿಜಯಪುರವು ದೇಶದ ರಕ್ಷಣಾ ಕ್ಷೇತ್ರಕ್ಕೂ ಮಹತ್ತರವಾದ ಸೇವೆಯನ್ನು ಒದಗಿಸಿದೆ ಎಂದರು.

ಕರ್ನಲ್ ಮೋಹನ ಮಠ ಮಾತನಾಡಿ, ವಿದ್ಯಾರ್ಥಿಗಳು ಸೈನ್ಯಕ್ಕೆ ಸೇರುವದರಿಂದ ಸೇವೆಯ ಜೊತೆಗೆ ಆತ್ಮತೃಪ್ತಿಯು ದೊರೆಯುತ್ತದೆ. ಮೇಲಾಗಿ ಜಾತಿ ಧರ್ಮಗಳಿಂದ ಅತೀತವಾದ ಜಾತ್ಯತೀತತೆ ಕಾಣುವುದೇ ಸೇನೆಯಲ್ಲಿ ಎಂದು ಹೇಳಿದರು.

ಮೇಜರ್ ಸಿ.ಎಸ್. ಆನಂದ, ಗಾಂಧಿಚೌಕ ಮಹಿಳಾ ಠಾಣೆ ಸಿಪಿಐ ಸಿ.ಬಿ ಬಾಗೇವಾಡಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಡಾ. ವಿ.ವಿ ಮಳಗಿ, ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ. ಬಿರಾದಾರ, ಮಂಜುನಾಥ ಜುನಗೊಂಡ, ಸಿದ್ಧಲಿಂಗ ಬಾಗೇವಾಡಿ, ವಿರೇಶ ವಾಲಿ,  ಗುರುರಾಜ ಹುಳಶ್ಯಾಳ, ಕಾಶೀನಾಥ ಮೂಲಿಮನಿ, ರಮೇಶ ಸಜ್ಜನ, ಜಗದೀಶ ತೆಗ್ಗಳ್ಳಿ, ಅಶೋಕ ರಾಠೋಡ, ರಾಹುಲ ಮಾದರ, ಶರಣು ಸಾರವಾಡ, ಲಾಯಪ್ಪ ಸುಣಗಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು