ವಿಜಯಪುರ: ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಸಮುದಾಯದ ಭಾಗವಹಿಸುವಿಕೆಯು ಅತ್ಯಂತ ಮಹತ್ವದ್ದಾಗಿದ್ದು, ಮಕ್ಕಳ ಶೈಕ್ಷಣಿಕ ಉನ್ನತಿಗೆ ಪಾಲಕರ ಪಾತ್ರ ಬಹು ಮಹತ್ವದ್ದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ್ ಹೇಳಿದರು.

ನಗರದ ಅಫಜಲಪುರ ಟಕ್ಕೆಯಲ್ಲಿರುವ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ. 49ರಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಹಾಗೂ ಶಾಲಾ ಪೋಷಕರ-ಶಿಕ್ಷಕರ ಮಹಾ ಸಭೆಯಲ್ಲಿ ಅವರು ಮಾತನಾಡಿದರು.

ಮನೆಯೇ ಮೊದಲ ಪಾಠ ಶಾಲೆ, ಜನನಿ ಮೊದಲ ಗುರು ಎಂಬಂತೆ ಮಕ್ಕಳು ಶಾಲೆಯಲ್ಲಿ ಕಲಿತ ದೈನಂದಿನ ವಿಷಯಗಳ ಕುರಿತಾಗಿ, ಪಾಲಕರು ಮಕ್ಕಳೊಂದಿಗೆ ಬೆರೆತು ಪ್ರೋತ್ಸಾಹಿಸಬೇಕು. ಮಗು ಮತ್ತಷ್ಟು ಪ್ರೇರಣೆ ಹೊಂದಿ, ತನ್ನ ಕಲಿಕೆಯಲ್ಲಿ ಉತ್ಸುಕತೆ ತೋರಿ, ವಿಷಯ ಕರಗತ ಮಾಡಿಕೊಳ್ಳಲು ಪಾಲಕರ ಸಹಕಾರ ಅತ್ಯಂತ ಅವಶ್ಯವಿದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ನೂರರಷ್ಟು ಹಾಜರಾತಿ ಇರಬೇಕು ಮತ್ತು ಶಾಲೆಗೆ ಆಗಮಿಸಿದ ಪ್ರತಿ ಮಗು ಅತ್ಯಂತ ಉತ್ಸಾಹದಿಂದ ಕಲಿಕೆಯಲ್ಲಿ ಭಾಗವಹಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಹೇಳಿದರು.

ಇಲಾಖೆಯಿಂದ ಪ್ರತಿ ತಿಂಗಳು ಪಾಲಕರ ಸಭೆಯನ್ನು ಆಯೋಜನೆ ಮಾಡಲಾಗುತ್ತಿದೆ. ಎಲ್ಲಾ ಪಾಲಕರು ಈ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ, ಅಗತ್ಯ ಸಲಹೆ ಸೂಚನೆ ನೀಡಬೇಕು ಎಂದರು.

ಸರ್ಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಬಿಸಿಯೂಟ, ಮೊಟ್ಟೆ, ಬಾಳೆಹಣ್ಣನ್ನು ಒದಗಿಸಲಾಗುತ್ತಿದೆ. ಪಾಲಕ-ಪೋಷಕರು ತಮ್ಮ ಮಕ್ಕಳನ್ನು ತಪ್ಪದೇ ಪ್ರತಿದಿನ ಶಾಲೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಹೊಸೂರ, ಎಸ್. ಡಿ. ಎಂ. ಸಿ ಅಧ್ಯಕ್ಷ ಯೋಗೇಶಕುಮಾರ ನಡುವಿನಕೇರಿ ಮಾತನಾಡಿದರು. ಪಾಲಕರಿಗೆ ಮತ್ತು ಸಾಧನೆಗೈದ ವಿದ್ಯಾರ್ಥಿಗಳಗೆ ಸನ್ಮಾನಿಸಲಾಯಿತು.

ಅಲ್ತಾಫ ಇಟಗಿ, ಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರಕಾಂತ ಕನಸೆ, ಎ.ಕೆ. ದಳವಾಯಿ, ಶಿಕ್ಷಣ ಸಂಯೋಜಕ ರಾಜು ಮಸೂತಿ, ಬಿ. ಆರ್. ಪಿ ಬಸವರಾಜ ಪಡಗಾನೂರ, ಸಿ.ಆರ್. ಪಿ. ಮತ್ತು ಎಸ್. ಬಿ. ಐ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ವಿಕಾಸ, ಮಲ್ಲಯ್ಯ ಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.