ತಾಳಿಕೋಟೆ: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದತೆಯೊಂದಿಗೆ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಆಚರಿಸಿ ಎಂದು ಮುದ್ದೇಬಿಹಾಳ ಸಿಪಿಐ ಮೊಹಮ್ಮದ್ ಫಸಿಯುದ್ದೀನ ಹೇಳಿದರು.

ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆ ನಿಮಿತ್ತ ಕರೆದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು.

ಪಿ.ಎಸ್.ಐ. ಜ್ಯೋತಿ ಖೋತ ಅವರು ಮಾತನಾಡಿ, ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ ಎಂದರು. ಪಟ್ಟಣದ ಗಣ್ಯರಾದ ಪ್ರಭುಗೌಡ ಮದರಕಲ್ಲ, ಇಬ್ರಾಹಿಂ ಮನ್ಸೂರ್, ಜೈ ಭೀಮ ಮುತ್ತಗಿ, ಗಣೇಶ ಪ್ರತಿಷ್ಠಾಪನಾ ಮಂಡಳಿಯ ಮುಖ್ಯಸ್ಥ ರಾಘವೇಂದ್ರ ವಿಜಾಪುರ, ವಿಜಯ ಕಲಾಲ ಹಾಗೂ ನಾಗರಾಜ್ ಬಳಿಗಾರ ಮಾತನಾಡಿದರು.

ಪಿಎಸ್ಐ ಆರ್.ಎಸ್.ಭಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದನಗೌಡ ದೊಡ್ಡಮನಿ ನಿರೂಪಿಸಿದರು. ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ, ಶಿವಾನಂದ ಜುಮನಾಳ, ಹೆಸ್ಕಾಂ ಎಇಇ ವಿಜಯಕುಮಾರ್ ಬಿರಾದಾರ, ಅಗ್ನಿಶಾಮಕ ದಳದ ಮಹಾಂತೇಶ ಬಿರಾದಾರ, ಪುರಸಭೆ ಸದಸ್ಯರಾದ ಡಿ.ವಿ.ಪಾಟೀಲ,ಪರಶುರಾಮ್ ತಂಗಡಗಿ, ಜೈಸಿಂಗ್ ಮೂಲಿಮನಿ, ಗಣ್ಯರಾದ ಶಶಿಧರ ಡಿಸಲೆ, ಪ್ರಕಾಶ ಹಜೇರಿ, ಸಂಗನಗೌಡ ಅಸ್ಕಿ, ಸಿಕಂದರ ವಠಾರ, ಡಿ.ಕೆ.ಪಾಟೀಲ,ಶಪೀಕ ಇನಾಮದಾರ, ಆಸೀಫ ಕೆಂಭಾವಿ, ಗಣೇಶ ಪ್ರತಿಷ್ಠಾಪನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.