ನಮ್ಮ ಜಿಲ್ಲೆಯ ವಿಜ್ಞಾನ ಕಾಲೇಜುಗಳು ಯಾವುದರಲ್ಲೂ ಕಮ್ಮಿಯಿಲ್ಲ. ಹೀಗಾಗಿ ಪೋಷಕರು ವಿದ್ಯಾರ್ಥಿಗಳು ಕರಾವಳಿ ಕಾಲೇಜುಗಳ ವ್ಯಾಮೋಹ ಬಿಡಬೇಕು. ಇಲ್ಲಿಯೇ ದಾಖಲಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.
–ಅರುಣ ಶಹಾಪೂರ, ವಿಧಾನ ಪರಿಷತ್ ಮಾಜಿ ಸದಸ್ಯ
ನಮ್ಮ ಕಾಲೇಜು ವಿದ್ಯಾರ್ಥಿಗಳು ಗರಿಷ್ಠ ಅಂಕಗಳಿಸಿ ದಾಖಲೆ ಬರೆದಿದ್ದಾರೆ. ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ಮೆಡಿಕಲ್ ಎಂಜಿನಿಯರಿಂಗ್‌ಗೆ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾಗುತ್ತಿದ್ದಾರೆ.
–ಬಸವರಾಜ ಕವಲಗಿ, ಸಂಸ್ಥಾಪಕ ಚೇರ್ಮನ್ ಏಕ್ಸಲೆಂಟ್ ಶಿಕ್ಷಣ ಸಂಸ್ಥೆ ವಿಜಯಪುರ
ಉತ್ತಮ ಶಿಕ್ಷಣ ಸ್ವಂತ ಊರಲ್ಲೇ ಕಡಿಮೆ ಖರ್ಚಿನಲ್ಲಿ ಸಿಗುತ್ತಿರುವ ಈ ಕಾಲಘಟ್ಟದಲ್ಲಿ ಬೇರೆ ಬೇರೆ ಊರುಗಳಿಗೆ ತೆರಳಿ ಪಿಯು ಶಿಕ್ಷಣ ಪಡೆಯುವ ಅಗತ್ಯ ಇಲ್ಲ. ಈ ನಿಟ್ಟಿನಲ್ಲಿ ಪೋಷಕರು ವಿದ್ಯಾರ್ಥಿಗಳು ಯೋಚಿಸಬೇಕು.
–ಜಯತೀರ್ಥ ಕುಲಕರ್ಣಿ, ಪ್ರಾಂಶುಪಾಲ ತುಂಗಳಾ ವಿಜ್ಞಾನ ಪದವಿ ಪೂರ್ವ ಕಾಲೇಜು ವಿಜಯಪುರ