ಸೋಮವಾರ, ಡಿಸೆಂಬರ್ 5, 2022
21 °C

ಬಣಜಿಗ ಸಮಾಜದಿಂದ ಉದ್ದೇಶ ಪೂರ್ವಕ ಪ್ರತಿಭಟನೆ: ಯತ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಬಣಜಿಗ ಸಮುದಾಯಕ್ಕೆ ನಾನು ಯಾವುದೇ ಅವಮಾನ ಮಾಡಿಲ್ಲ. ಕೆಲ ಮಂದಿ ಉದ್ದೇಶ ಪೂರ್ವಕವಾಗಿ ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂಗಲ್ಲಾ ಪ್ರತಿಭಟನೆ ಮಾಡಿಕೊಳ್ಳುತ್ತಾ ಹೋದರೆ ಮುಂದಿನ ದಿನಗಳಲ್ಲಿ ಅವರ ಸಮಾಜದ ಜನಪ್ರತಿನಿಧಿಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದರ ಪರಿಣಾಮ ಅವರ ಸಮಾಜದ ಮಹಾನಾಯಕ ಔಟ್‌ ಆದರೂ ಅಚ್ಚರಿ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಬೇಕು, ಯತ್ನಾಳ ಮುಗಿಸಬೇಕು ಎಂದು ಕಾಂಗ್ರೆಸ್‌, ಬಿಜೆಪಿಯಲ್ಲಿರುವ ಕೆಲ ಕಳ್ಳರ ಗ್ಯಾಂಗ್‌ ಮುಧೋಳ, ಬೆಂಗಳೂರಿನಿಂದ ನನ್ನ ವಿರೋಧಿಗಳಿಗೆ ಸಹಾಯ ಹಸ್ತ ನೀಡಿದ್ದರು. ಆದರೆ, ವಿಜಯಪುರ ಜನ ಹುಚ್ಚರಿಲ್ಲ. ತಕ್ಕ ಉತ್ತರ ನೀಡಿದ್ದಾರೆ. ಇನ್ನಾದರೂ ಬುದ್ದಿ ಕಲಿತು ನಿವೃತ್ತಿ ಜೀವನ ಮನೆಯಲ್ಲಿ ಅರಾಂ ಆಗಿ ಮಾಡಲಿ ಎಂದು ಯತ್ನಾಳ ಟಾಂಗ್‌ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.