ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಸಿ.ಸಿ ರಸ್ತೆ ಕಾಮಗಾರಿ: ಯತ್ನಾಳ

Last Updated 31 ಜನವರಿ 2022, 11:56 IST
ಅಕ್ಷರ ಗಾತ್ರ

ವಿಜಯಪುರ: ಈ ಹಿಂದೆ ವಿಜಯಪುರ ನಗರದಲ್ಲಿ ಸಿ.ಸಿ ರಸ್ತೆ ಅಂದರೆ ಗೊತ್ತಿರಲಿಲ್ಲ. ಆದರೆ, ಇಂದು ನಗರದಲ್ಲಿ ಗುಣಮಟ್ಟದ ಸಿ.ಸಿ ರಸ್ತೆ ಕಾಮಗಾರಿಗಳು ಆಗುತ್ತಿರುವುದನ್ನು ನೋಡಿ ಜನ ಸಂತೋಷ ಪಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿನ ಮಲ್ಲಿಕಾರ್ಜುನ ನಗರದಲ್ಲಿ ಒಳಚರಂಡಿ ಕಾಮಗಾರಿ ಹಾಗೂ ಸ್ವಾತಂತ್ರ್ಯ ಯೋಧರ ಕಾಲೊನಿಯಲ್ಲಿ ಶರಣ ಹಡಪದ ಅಪ್ಪಣ್ಣನವರ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಗರದ ಕೆಲವು ಕಡೆ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನು ಕೆಲವು ಕಡೆ ಅಭಿವೃದ್ಧಿ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ನಗರದ ಬಡಾವಣೆ ಕಾಲೊನಿಗಳಲ್ಲಿ ಮೊದಲು ಒಳಚರಂಡಿ ಕೆಲಸ ಪೂರ್ಣಗೊಳಿಸಿ ಅದರೊಂದಿಗೆ ಗುಣಮಟ್ಟದ ರಸ್ತೆ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಹೀಗೆ ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವುದರಿಂದಾಗಿ 20 ರಿಂದ 25 ವರ್ಷಗಳ ವರೆಗೆ ಬಾಳಿಕೆ ಬರುವಂತೆ ಉತ್ತಮ ಕಾಮಗಾರಿಗಳಾಗುತ್ತವೆ ಎಂದರು.

ಈಗಾಗಲೇ ಜಿಲ್ಲಾಡಳಿತ ಭವನ ಕಟ್ಟಡ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಲಾಗಿದೆ. ಹೊಸಜಿಲ್ಲಾಡಳಿತ ಭವನ ನಿರ್ಮಾಣದಿಂದಾಗಿ ಎಲ್ಲ ಸರ್ಕಾರಿ ಕಚೇರಿಗಳ ಸೇವೆಗಳು ನಾಗರಿಕರಿಗೆ ಒಂದೇ ಕಡೆ ಲಭ್ಯವಾಗುವುದರಿಂದಾಗಿ ಸಾರ್ವಜನಿಕರಿಗೆ ಒಂದು ಕಡೆಯಿಂದ ಮತ್ತೊಂದು ಕಡೆ ಕಚೇರಿಯಿಂದ ಕಚೇರಿಗೆ ಅಲೆದಾಟ ತಪ್ಪುತ್ತದೆ ಎಂದು ಹೇಳಿದರು.

ನಗರದ ಯಾವ ಬಡಾವಣೆಗಳನ್ನು ಬಿಡದೇ ಎಲ್ಲ ಕಡೆ ರಸ್ತೆ, ಒಳಚರಂಡಿ, ಮಳೆನೀರು ಚರಂಡಿ ಕಾಮಗಾರಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವದು. ನಗರದಲ್ಲಿ 24X7 ಕುಡಿಯುವ ನೀರು ಪುರೈಕೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯ ಲಕ್ಷ್ಮಣ ಜಾಧವ್, ಪಾಲಿಕೆ ಮಾಜಿ ಸದಸ್ಯ ಪರಶುರಾಮ ರಜಪೂತ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ಮುಖಂಡರಾದ ಚಂದ್ರು ಚೌಧರಿ, ಸಂತೋಷ ಪಾಟೀಲ, ವಿದ್ಯಾಧರ ನ್ಯಾಮಗೊಂಡ, ಪಾಂಡು ಸಾಹುಕಾರ ದೊಡ್ಡಮನಿ, ಶಿವಯ್ಯ ಮಠಪತಿ, ಆನಂದ ಗೊಳಸಂಗಿ, ಬಸವರಾಜ ಶಿವಶರಣರ, ಐ.ಪಿ.ಪಾಟೀಲ, ಶರಣು ನಿಡಗುಂದಿ, ಜಿ.ಎಸ್.ಹೊಸಟ್ಟಿ, ವಿರುಪಾಕ್ಷ ಕತಕನಹಳ್ಳಿ, ಅಶೋಕ ನಾವಿ, ಬಿಜೆಪಿ ಮಹಿಳಾ ಮೊರ್ಚಾ ನಗರ ಅಧ್ಯಕ್ಷೆ ಛಾಯಾ ಮಶಿಯವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT