ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಪ್ಪ ದುರಂತ: ಮತ್ತೆ ಇಬ್ಬರ ಶವ ಪತ್ತೆ

Published 4 ಜುಲೈ 2024, 16:20 IST
Last Updated 4 ಜುಲೈ 2024, 16:20 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಕೊಲ್ಹಾರ ಸಮೀಪ ಬಳೂತಿಯಲ್ಲಿ ಪೊಲೀಸರ ಕಾರ್ಯಾಚರಣೆಗೆ ಹೆದರಿ ತೆಪ್ಪದಲ್ಲಿ ತಪ್ಪಿಸಿಕೊಳ್ಳಲು  ಯತ್ನಿಸಿ ನೀರುಪಾಲಾಗಿದ್ದ ರಫೀಕ್ ಬಾಂಬೆ (40) ಮತ್ತು ಮೆಹಬೂಬ್ ವಾಲಿಕಾರ (35) ಎಂಬುವರ ಶವ ಗುರುವಾರ ಪತ್ತೆಯಾದವು.

‘ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ಮೀನುಗಾರರ ನೆರವಿನಿಂದ ಇಬ್ಬರ ಶವಗಳನ್ನು ಹೊರತರಲಾಯಿತು. ಬುಧವಾರ ಮೂವರ ಶವಗಳು ಪತ್ತೆಯಾಗಿದ್ದವು’ ಎಂದು ಪೊಲೀಸರು ತಿಳಿಸಿದ್ದಾರೆ.

‘ತೆಪ್ಪ ಮಗುಚಿ ನೀರಿಗೆ ಬಿದ್ದಾಗ, ಮೀನಿನ ಬಲೆಯಲ್ಲಿ ಸಿಲುಕಿಕೊಂಡು ಕೆಲವರಿಗೆ ನೀರಿನಿಂದ ಹೊರಗಡೆ ಬರಲು ಆಗಲಿಲ್ಲ’ ಎಂದು ನೀರಿನಿಂದ ಈಜಿ ಬಂದವರು ತಿಳಿಸಿದರು.

‘ತೆಪ್ಪ ದುರಂತದ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT