ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಅಕ್ಕಿ ಪ್ರಮಾಣ ಕಡಿತ: ಖಂಡನೆ

Last Updated 23 ಏಪ್ರಿಲ್ 2021, 15:43 IST
ಅಕ್ಷರ ಗಾತ್ರ

ವಿಜಯಪುರ:ಬಿಪಿಎಲ್ ಕಾರ್ಡ್‌ದಾರರಿಗೆ ನೀಡುತ್ತಿರುವ ತಲಾ 5 ಕೆ.ಜಿ ಅಕ್ಕಿಯನ್ನು ಇನ್ನು ಮುಂದೆ 2 ಕೆ.ಜಿಗೆ ಇಳಿಸಿ, ಅದರ ಬದಲು ಮೈಸೂರು ಭಾಗದಲ್ಲಿ 3 ಕೆ.ಜಿ ರಾಗಿ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ 3 ಕೆ.ಜಿ ಜೋಳವನ್ನು ನೀಡುವುದು. ಅಲ್ಲದೇ, ಅಂತ್ಯೋದಯ ಅನ್ನ ಯೋಜನೆಯ ಪ್ರತಿ ಕಾರ್ಡ್‌ದಾರರಿಗೆ ಮಾಸಿಕ 35 ಕೆ.ಜಿ ಅಕ್ಕಿಯನ್ನು 15 ಕೆ.ಜಿಗೆ ಇಳಿಸಲು ತಿರ್ಮಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಎಸ್‍ಯುಸಿಐ ಕಮ್ಯೂನಿಷ್ಟ್‌ ಪಕ್ಷದ ವಿಜಯಪುರ ಜಿಲ್ಲಾ ಸಮಿತಿಜಿಲ್ಲಾ ಕಾರ್ಯದರ್ಶಿ ಬಿ.ಭಗವಾನರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ.

ಈ ಹಿಂದೆ ಅನ್ನ ಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ತಲಾ 7 ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಇದನ್ನು ಸದ್ದಿಲ್ಲದೆ 5 ಕೆ.ಜಿ ಗೆ ಇಳಿಸಲಾಗಿತ್ತು. ಆ ಸಂದರ್ಭದಲ್ಲಿ ಕೆಂದ್ರ ಸರ್ಕಾರವು ಹೆಚ್ಚುವರಿ ದವಸ, ಧಾನ್ಯ ಪೂರೈಸಿದ್ದರಿಂದ ಬಡವರಿಗೆ ತಕ್ಷಣಕ್ಕೆ ಇದರ ಪರಿಣಾಮ ತಟ್ಟಲಿಲ್ಲ. ಕಳೆದ ನವೆಂಬರ್‌ನಿಂದ ಕೇಂದ್ರದ ಆ ಹೆಚ್ಚುವರಿ ಯೋಜನೆ ಮುಗಿದಿದೆ ಎಂದು ಹೇಳಿದರು.

ಇದೀಗ ಕೋವಿಡ್ ಎರಡನೇ ಅಲೇ ತೀವ್ರ ಸ್ವರೂಪ ಪಡೆದುಕೊಂಡಿದ್ದು ಜನತೆ ಮತ್ತೆ ಕಂಗಾಲಾಗಿದ್ದಾರೆ. ಮತ್ತೇ ಭಾಗಶ: ಲಾಕ್‌ ಡೌನ್ ಹೇರಲಾಗುತ್ತಿದೆ. ಕೂಲಿಕಾರರು ಬೀದಿ ಬದಿ ವ್ಯಾಪಾರಿಗಳು ಬಡವರು ಬಡವರು ಊಟಕ್ಕೆ ಪರದಾಡುವ ಪರಿಸ್ಥಿತಿ ಬಂದಿದೆ ಎಂದು ಅವರು ತಿಳಿಸಿದರು.

ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕೂಡಾ ಈಗ ರಾಜ್ಯಕ್ಕೆ ಆಹಾರ ಪದಾರ್ಥಗಳು ಒದಗಿಸಿ ತನ್ನ ಜವಾಬ್ದಾರಿ ಮೆರೆಯಬೇಕಿದೆ. ಇಂತಹ ಸಂದರ್ಭದಲ್ಲಿ ಪಡಿತರ ವಿತರಣೆಯ ಸಾಮಗ್ರಿಗಳನ್ನು ಹೆಚ್ಚು ಮಾಡಬೇಕಲ್ಲದೇ, ಕಡಿತಗೊಳಿಸಿಸುವ ಕ್ರಮವಂತೂ ಅತ್ಯಂತ ಅಮಾನವೀಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

***

ರಾಗಿ, ಜೋಳವನ್ನು ಹೆಚ್ಚುವರಿಯಾಗಿ ನೀಡಬೇಕೇ ಹೊರತು, ಅಕ್ಕಿಯನ್ನು ಕಡಿತಗೊಳಿಸಿರುವುದು ಖಂಡನೀಯ. ಬೇಳೆಕಾಳುಗಳು, ಎಣ್ಣೆ, ಸಕ್ಕರೆ ಮೊದಲಾದ ಅಗತ್ಯ ಪದಾರ್ಥಗಳನ್ನೂ ಪಡಿತರ ಮೂಲಕ ವಿತರಿಸಬೇಕು.
-ಬಿ.ಭಗವಾನರೆಡ್ಡಿ,ಜಿಲ್ಲಾ ಕಾರ್ಯದರ್ಶಿ,ಎಸ್‍ಯುಸಿಐ ಕಮ್ಯೂನಿಷ್ಟ್‌ ಪಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT