ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಉದ್ಯಾನ ಉಳಿಸಲು ಆಗ್ರಹ

Last Updated 10 ಆಗಸ್ಟ್ 2021, 15:12 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿನ ಸಂಗಮೇಶ್ವರ ಕಾಲೊನಿಯಲ್ಲಿರುವ ಮಹಾನಗರ ಪಾಲಿಕೆ ಉದ್ಯಾನವನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ಲೀಸ್‌ ಕೊಟ್ಟಿರುವುದನ್ನು ಕೂಡಲೇ ರದ್ದುಪಡಿಸಬೇಕು ಎಂದು ಸಂಗಮೇಶ್ವರ ಮತ್ತು ಭಾವಸಾರ ನಗರ, ಗ್ಯಾಂಗ್‌ ಬಾವಡಿ, ಸಿಂಧೆ ಕಾಲೊನಿ ನಿವಾಸಿಗಳು ಆಗ್ರಹಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಈ ಸಂಬಂಧ ಮಂಗಳವಾರ ಮನವಿ ಸಲ್ಲಿಸಿದರು.

ಉದ್ಯಾನದಲ್ಲಿ ಈಗಾಗಲೇ ಶಾಸಕರ ಅನುದಾನದಲ್ಲಿ ಓಪನ್‌ ಜಿಮ್‌, ವಾಕಿಂಗ್‌ ಪಾಥ್‌ ನಿರ್ಮಿಸಲಾಗಿದೆ. ಗಿಡಮರಗಳನ್ನು ಬೆಳಸಲಾಗಿದೆ. ಪ್ರತಿ ದಿನ ಬೆಳಿಗ್ಗೆ, ಸಂಜೆ ಸಾರ್ವಜನಿಕರು ವಾಯು ವಿಹಾರ, ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂತಹ ಉದ್ಯಾನವನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ಲೀಸ್‌ ನೀಡಿರುವುದು ಏಕೆ ಎಂದು ಸಾರ್ವಜನಿಕರು ಪ್ರಶ್ನಿಸಿದರು.

ಸಾರ್ವಜನಿಕ ಉದ್ಯಾನವನ್ನು ಪರಂ ಜ್ಯೋತಿ ಶಿಕ್ಷಣ ಸಂಸ್ಥೆಗೆ ಕಾನೂನು ಬಾಹಿರವಾಗಿ 30 ವರ್ಷಗಳಿಗೆ ಲೀಸ್‌ ಕೊಡಲಾಗಿದೆ. ಇದರಿಂದ ಉದ್ಯಾನವನ್ನು ಸಾರ್ವಜನಿಕರು ಬಳಸದಂತಾಗಿದೆ ಎಂದು ಕಾಲೊನಿ ನಿವಾಸಿಗಳು ಆರೋಪಿಸಿದರು.

ಕಾಲೊನಿಯ ಸಾರ್ವಜನಿಕರ ಹಿತದೃಷ್ಟಿಯಿಂದ ಉದ್ಯಾನವನ್ನು ಸಂಸ್ಥೆಗೆ ಲೀಸ್‌ ಕೊಡದೇ ಪಾಪಸ್‌ ಪಾಲಿಕೆಯ ಸುಪರ್ದಿಗೆ ಪಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT