ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ರಾನಡೆ ಆಶ್ರಮದಲ್ಲಿ ಮೋಹನ್‌ ಭಾಗವತ್‌ ವಾಸ್ತವ್ಯ

Published 26 ಜೂನ್ 2024, 13:58 IST
Last Updated 26 ಜೂನ್ 2024, 13:58 IST
ಅಕ್ಷರ ಗಾತ್ರ

ವಿಜಯಪುರ: ಇಂಡಿ ತಾಲ್ಲೂಕಿನ ನಿಂಬಾಳ ಗ್ರಾಮದಲ್ಲಿರುವ ಗುರುದೇವ ರಾನಡೆ ಆಶ್ರಮದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಎರಡು ದಿನಗಳಿಂದ ವಾಸ್ತವ್ಯ ಹೂಡಿದ್ದಾರೆ.

ಯಾವುದೇ ಸಭೆ, ಸಮಾರಂಭಗಳಲ್ಲಿ ಭಾಗವಹಿಸದೇ ಕೇವಲ ಧ್ಯಾನ, ಭಜನೆಯಲ್ಲಿ ತೊಡಗಿದ್ದಾರೆ. ಪ್ರತಿ ವರ್ಷ ಜೂನ್‌ ಅಥವಾ ಜುಲೈನಲ್ಲಿ ಅವರು ಇಲ್ಲಿಗೆ ಭೇಟಿ ನೀಡಿ, ಧ್ಯಾನದಲ್ಲಿ ತೊಡಗುತ್ತಾರೆ. ಸಾರ್ವಜನಿಕರು, ಮುಖಂಡರು ಸೇರಿದಂತೆ ಯಾರನ್ನೂ ಈ ಸಂದರ್ಭದಲ್ಲಿ ಅವರು ಭೇಟಿಯಾಗುವುದಿಲ್ಲ. ಜೊತೆಗೆ ಝಡ್‌ ಫ್ಲಸ್‌ ಭದ್ರತೆ ಇರುವುದರಿಂದ ಯಾರನ್ನೂ ಆಶ್ರಮಕ್ಕೆ ಬಿಡುತ್ತಿಲ್ಲ.

ಜೂನ್‌ 27ರಂದು ಹೊರ್ತಿ ಸಮೀಪದ  ಇಂಚಗೇರಿ ಮಠಕ್ಕೆ ಮೋಹನ ಭಾಗವತ್ ಭೇಟಿ ನೀಡಲಿದ್ದಾರೆ. ಶ್ರೀ ಮಠದ ಗುರುಲಿಂಗ ಮಹಾರಾಜರ ಮತ್ತು ಬಾವೂಸಾಹೇಬ ಮಹಾರಾಜರ ದೇಗುಲದಲ್ಲಿ ಭಜನೆ, ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಆ ನಂತರ ದೇವರ ನಿಂಬರಗಿಯ ಶ್ರೀಮಠದ ಗುರುಲಿಂಗ ಮಹಾರಾಜರ ದೇಗುಲ ದರ್ಶನ ಪಡೆದು, ನೆರೆಯ ಮಹಾರಾಷ್ಟ್ರದ ಉಮದಿಯ ಬಾವೂಸಾಹೇಬ ಮಹಾರಾಜರ ದೇಗುಲಕ್ಕೆ ಭೇಟಿ ನೀಡಿ ನಾಗಪುರಕ್ಕೆ ತೆರಳಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT