ಮಂಗಳವಾರ, ಜೂನ್ 15, 2021
27 °C

ಕೋವಿಡ್ ಎದುರಿಸಲು ಆತ್ಮ ಸ್ಥೈರ್ಯ ಮುಖ್ಯ: ಶುಶ್ರೂಷಕಿ ವೈಶಾಲಿ ಗದ್ಯಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್ ವಾರ್ಡ್‌ನಲ್ಲಿ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸುವುದು ಸವಾಲಿನ ಕೆಲಸವೇ ಸರಿ. ಪಿಪಿಇ ಕಿಟ್‌ ಐದು ನಿಮಿಷ ಧರಿಸಲು ಕಷ್ಟವಾಗುತ್ತದೆ. ಅಷ್ಟೊಂದು ಮೈ ಬೆವರುತ್ತಿದೆ. ನಮ್ಮ ಉಸಿರಾಟ, ಆರೋಗ್ಯದಲ್ಲೇ ಏರುಪೇರಾಗುತ್ತದೆ ಎನ್ನುತ್ತಾರೆ ನಗರದ ಬಿ.ಎಲ್‌.ಡಿ.ಇ ಆಸ್ಪತ್ರೆಯಲ್ಲಿ 15 ವರ್ಷಗಳಿಂದ‌ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವೈಶಾಲಿ ಗದ್ಯಾಳ (ಸಂಬಣ್ಣಿ).

ಕೋವಿಡ್ ಒಂದನೇ ಅಲೆಯಲ್ಲೂ ರೋಗಿಗಳ ಸೇವೆ ಮಾಡಿದ್ದೇನೆ. ಈಗ ಎರಡನೇ ಅಲೆಯಲ್ಲೂ ಕಾರ್ಯನಿರ್ವಹಿಸುತ್ತಿದ್ದೇನೆ.

ಕರ್ತವ್ಯದ ಜೊತೆಗೆ ನಮ್ಮ ಕುಟುಂಬದ ಕಡೆಗೂ ಗಮನ ಇಟ್ಟಿದ್ದೇನೆ. ಮನೆಯಲ್ಲಿ ಎರಡು ಮಕ್ಕಳು ಪತಿ ಹಾಗೂ ಅತ್ತೆ ಇದ್ದಾರೆ. ಕೊರೊನಾ ಕರ್ತವ್ಯ ಮುಗಿಸಿ ಮನೆಗೆ ಹೋದಾಗ ಬೇರೆ ಕೋಣೆಯಲ್ಲಿ ಪ್ರತ್ಯೇಕವಾಗಿರುವ ಮೂಲಕ ಮುಂಜಾಗ್ರತಾ ಕ್ರಮ ವಹಿಸಿದ್ದೇನೆ. ಕೊರೊನಾ ಲಸಿಕೆ ಕೂಡಾ ಪಡೆದುಕೊಂಡಿದ್ದೇನೆ.

ಕೊರೊನಾ ಬಗ್ಗೆ ಹೆಚ್ಚಿನ ಜನರಲ್ಲಿ ಭಯ ಆವರಿಸಿಕೊಂಡಿದೆ. ಭಯದಿಂದ ಹೊರಬಂದು ಮುಂಜಾಗ್ರತಾ ಕ್ರಮ ಅನುಸರಿಸಬೇಕು. ರೋಗದ ಲಕ್ಷಣ ಕಂಡು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಆಸ್ಪತ್ರೆಯಲ್ಲಿ ರೋಗಿಗಳು ಚಿಕಿತ್ಸೆ ಪಡೆಯುವಾಗ ತಮ್ಮ ಆರೋಗ್ಯಕ್ಕಿಂತ ಹೆಚ್ಚು ಪಕ್ಕದ ರೋಗಿಯನ್ನು ನೋಡುತ್ತಿರುತ್ತಾರೆ. ಪಕ್ಕದ ಬೆಡ್‌‌ನವರನ್ನು ನೋಡಿ ಭಯ ಪಡುತ್ತಾರೆ. ಆ ಸಮಯದಲ್ಲಿ ಅವರಿಗೆ ಧೈರ್ಯ ನೀಡುವ, ಆತ್ಮ ಸ್ಥೈರ್ಯ ಹೆಚ್ಚಿಸುವ ಮಾತುಗಳನ್ನು ಹೇಳುತ್ತೇವೆ ಎನ್ನುತ್ತಾರೆ ಶುಶ್ರೂಷಕಿ ವೈಶಾಲಿ ಗದ್ಯಾಳ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು