ತಿಕೋಟಾ: ತಾಲ್ಲೂಕಿನ ಕಳ್ಳಕವಟಗಿಯ ಸಂಗಮಾನಾಥನ ಜಾತ್ರಾ ಮಹೋತ್ಸವ ಅಂಗವಾಗಿ ಶ್ರಾವಣ ಮಾಸದ ಮೊದಲ ಸೋಮವಾರ (ಆ.5)ದಿಂದ, ಜಾತ್ರೆ ನಡೆಯುವ ಮೂರನೇ ಸೋಮವಾರ (ಆ.19)ದವರೆಗೆ ನಿತ್ಯ ಸಂಜೆ 7.30 ರಿಂದ 8.30 ವರೆಗೆ ಹಾನಗಲ್ ಕುಮಾರ ಶಿವಯೋಗಿಗಳ ಪುರಾಣ ನಡೆಯಲಿದೆ.
ಯರನಾಳದ ಹಿರೇಮಠ ಸಂಸ್ಥಾನದ ಶಿವಪ್ರಸಾದ ದೇವರು ಅವರಿಂದ ಪ್ರವಚನ ನಡೆಯಲಿದೆ ಎಂದು ಸಂಗಮನಾಥ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.