ಸಿಂದಗಿ: ಪಟ್ಟಣದ ಆಲಮೇಲ ರಸ್ತೆಯಲ್ಲಿ ಸರ್ಕಾರಿ ಆಸ್ಪತ್ರೆ ಬಳಿ ಇದ್ದ ಮಹಾತ್ಮಗಾಂಧಿ ವೃತ್ತ ತೆರುವುಗೊಂಡಿದೆ. ಅದರಲ್ಲಿದ್ದ ಗಾಂಧಿ ಪುತ್ಥಳಿ ಅಸುರಕ್ಷಿತ ಸ್ಥಳದಲ್ಲಿ ಇಡಲಾಗಿದೆ ಎಂಬ ದೂರು ಕೇಳಿಬಂದಿದೆ.

1994-95ರ ಸಾಲಿನಲ್ಲಿ ಮತಕ್ಷೇತ್ರದ ಅಂದಿನ ಶಾಸಕ, ಸಚಿವರೂ ಆಗಿದ್ದ ಎಂ.ಸಿ.ಮನಗೂಳಿಯವರು ಈ ವೃತ್ತ ನಿರ್ಮಿಸಿ ಪುತ್ಥಳಿ ಅನಾವರಣಗೊಳಿಸಿದ್ದರು.

ಸಿಂದಗಿ ಪಟ್ಟಣದಲ್ಲಿ ಮಹಾತ್ಮಗಾಂಧಿ ವೃತ್ತ ಮತ್ತು ಪುತ್ಥಳಿ ಸ್ಥಾಪನೆಗೊಳ್ಳಬೇಕು ಎಂದು ಚಿಕ್ಕರೂಗಿ ಗ್ರಾಮದ ಸ್ವಾತಂತ್ರ್ಯಯೋಧ ದುಂಡಪ್ಪ ಅವರು ಅಂದು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

ಎಂ.ಸಿ.ಮನಗೂಳಿಯವರು ಸ್ವಾತಂತ್ರ್ಯ ಹೋರಾಟಗಾರರ ಆಶಯದಂತೆ ಮಹಾತ್ಮಗಾಂಧಿ ವೃತ್ತ ನಿರ್ಮಿಸಿ ಪುತ್ಥಳಿ ಅನಾವರಣಗೊಳಿಸುವೆ ಉಪವಾಸ ಸತ್ಯಾಗ್ರಹ ಕೈ ಬಿಡುವಂತೆ ಸ್ವಾತಂತ್ರ್ಯ ಹೋರಾಟಗಾರ ದುಂಡಪ್ಪ ಅವರನ್ನು ವಿನಂತಿಸಿಕೊಂಡು, ಕೊಟ್ಟ ಭರವಸೆಯಂತೆ ವೃತ್ತ ನಿರ್ಮಾಣದೊಂದಿಗೆ ಪುತ್ಥಳಿಯೂ ಅನಾವರಣಗೊಂಡಿತು.

2024ಅಕ್ಟೋಬರ್ 2 ರಂದು ಮಹಾತ್ಮಗಾಂಧಿ ಜಯಂತಿ ಯಂದು ಮತಕ್ಷೇತ್ರದ ಸಧ್ಯದ ಶಾಸಕ ಅಶೋಕ ಮನಗೂಳಿ ಪಟ್ಟಣದಲ್ಲಿರುವ ಮಹಾತ್ಮಗಾಂಧಿ ವೃತ್ತವನ್ನು ನವೀಕರಣಗೊಳಿಸಿ ಮಹಾತ್ಮಗಾಂಧಿ ಹೊಸ ಪುತ್ಥಳಿ ಅನಾವರಣಗೊಳಿಸುವದರೊಂದಿಗೆ 2025 ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ಲೋಕಾರ್ಪಣೆಗೊಳ್ಳುವುದು ಎಂದು ಭರವಸೆ ನೀಡಿದ್ದರು. ಆದರೆ, ಅವರ ಹೇಳಿಕೆಯಂತೆ ಲೋಕಾರ್ಪಣೆಗೊಳ್ಳಲಿಲ್ಲ. ಮೊದಲಿದ್ದ ಮಹಾತ್ಮಗಾಂಧಿ ವೃತ್ತದ ಸ್ಥಳದಲ್ಲಿ ವಿಸ್ತಾರಗೊಂಡ ಪ್ರದೇಶದಲ್ಲಿ ಈಗ ರಾಷ್ಟ್ರೀಯ ಲಾಂಛನ ಸ್ತಂಭದ ವೃತ್ತ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಈಗ ನವೆಂಬರ್ 12ರಂದು ಮೊದಲಿದ್ದ ಗಾಂಧಿ ವೃತ್ತ ತೆರುವುಗೊಂಡಿದೆ. ಅದರಲ್ಲಿದ್ದ ಪುತ್ಥಳಿಯನ್ನು ವೃತ್ತದ ಹಿಂದುಗಡೆ ಇರುವ ಸರ್ಕಾರಿ ಬಾಲಕಿಯರ ವಸತಿನಿಲಯದ ಗೇಟ್ ಬಳಿ ನಿರ್ಮಿಸುತ್ತಿರುವ ನಿಯೋಜಿತ ಮಹಾತ್ಮಗಾಂಧಿ ವೃತ್ತದ ಸ್ಥಳದಲ್ಲಿ ಕೂರಿಸಲಾಗಿದೆ. ಈ ಸ್ಥಳ ದೂಳುಮಯವಾಗಿದೆ ಅಲ್ಲದೇ ಅಸುರಕ್ಷಿತವಾಗಿದೆ. ಪುತ್ಥಳಿ ಒಂದು ರೀತಿಯಲ್ಲಿ ಅನಾಥ ಸ್ಥಿತಿಯಲ್ಲಿರುವಂತೆ ಗೋಚರವಾಗುತ್ತಿದೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಮಹಾತ್ಮಗಾಂಧಿ ಪುತ್ಥಳಿಯನ್ನು ವಸತಿ ನಿಲಯ ಇಲ್ಲವೇ ಸರ್ಕಾರಿ ಕಚೇರಿಗಳಲ್ಲಿ ಸುರಕ್ಷಿತವಾದ ಸ್ಥಳದಲ್ಲಿ ಗೌರವಯುತವಾಗಿ ಕೂರಿಸುವಂತೆ ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಅವರು ನೂತನ ವೃತ್ತ ಕಾಮಗಾರಿ ಕೈಗೊಂಡ ಗುತ್ತಿಗೆದಾರನಿಗೆ ತಿಳಿಸಿದರೂ ಪುತ್ಥಳಿ ಇನ್ನೂ ಅದೇ ಸ್ಥಳದಲ್ಲಿದೆ.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರಪಿತ ಮಹಾತ್ಮಗಾಂಧಿ ಪುತ್ಥಳಿಯನ್ನು ಹೀಗೆ ಅವಮಾನಕರ ರೀತಿಯಲ್ಲಿ ದೂಳುಮಯ ಜಾಗೆಯಲ್ಲಿ ಕೂರಿಸಿರುವುದು ಅತ್ಯಂತ ಖಂಡನೀಯ ಎಂದು ಪ್ರಶಾಂತ ಕದ್ದರಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ನೂತನವಾಗಿ ನಿರ್ಮಿಸುತ್ತಿರುವ ಮಹಾತ್ಮ ಗಾಂಧಿ ವೃತ್ತ ವಸತಿ ನಿಲಯದ ಗೇಟ್ ಬಳಿ ಇರುವುದು ಸರಿ ಎನಿಸುವದಿಲ್ಲ. ಮೊದಲಿದ್ದ ಸ್ಥಳದಲ್ಲಿಯೇ ನವೀಕರಣಗೊಳಿಸಿ ಕಾಯಕಲ್ಪ ಕೊಡಬಹುದಿತ್ತು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.