ವಿಜಯಪುರ: ಸಮಾಜದಲ್ಲಿ ಇಂದು ಸಂವಾದ ಮನಸ್ಥಿತಿ ಬದಲು ಸಂಹಾರ ಮನಸ್ಥಿತಿ ಹೆಚ್ಚಾಗಿದೆ ಎಂದು ಮೈಸೂರಿನ ಕುಂದೂರು ಮಠದ ಡಾ. ಶರತ್ಚಂದ್ರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ 40 ಸಂಪುಟಗಳ ಲೋಕಾರ್ಪಣೆ ಹಾಗೂ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಸಂಶೋಧನೆಗಳ ಮೂಲಕ ಡಾ. ಎಂ. ಎಂ. ಕಲಬುರ್ಗಿ ಅವರು ಸತ್ಯ ಹೇಳಿದ ಕಾರಣಕ್ಕೆ ಸಮಾಜ ವಿರೋಧಿ ಎಂದು ಅವರನ್ನು ಒಂದು ವರ್ಗ ಪರಿಗಣಿಸಿತು. ಕಟುವಾಗಿ ಮಾತನಾಡುವವರನ್ನು ಸಮಾಜ ಸಹಿಸುವುದಿಲ್ಲ, ಸುಳ್ಳು ಮಾತನಾಡುವವರನ್ನು ಒಪ್ಪಿಕೊಳ್ಳುತ್ತಿದೆ ಎಂಬುದಕ್ಕೆ ಕಲಬುರ್ಗಿ ನಿದರ್ಶನ ಎಂದು ಹೇಳಿದರು.

ಸಂಶೋಧನೆ ಮೂಲಕ ಚರಿತ್ರೆಯ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಹೋರಾಡಬೇಕಿದೆ ಎಂದು ಕಲಬುರ್ಗಿ ಪ್ರತಿಪಾದಿಸಿದ್ದರು. ಸ್ಥಗಿತ ಸಂಶೋಧನೆಗಿಂತ ಸಮಾಜಕ್ಕೆ ಚಲನಶೀಲಾ ಸಂಶೋಧಕರು ಅಗತ್ಯ ಎಂದು ಕಲಬುರ್ಗಿ ಹೇಳುತ್ತಿದ್ದರು ಎಂದರು.

ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತಿದೆ. ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗವೂ ಆಗುತ್ತಿದೆ. ಸಮಾಜ ಸಂಕೀರ್ಣ, ಸಂಕುಚಿತರಾಗುತ್ತಿದ್ದಾರೆ. ಈ ಸಂಕುಚಿತತೆ ತೆಗೆಯಬೇಕು ಎಂದರೆ ಕಲಬುರ್ಗಿ ಸಂಶೋಧನೆಗಳು ನಮಗೆ ಮಾರ್ಗದರ್ಶನವಾಗಬೇಕಿದೆ ಎಂದು ಹೇಳಿದರು.

ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಕಲಬುರ್ಗಿ ಸಮಗ್ರ ಸಾಹಿತ್ಯ ಸಂಪುಟವು ಕಲಬುರ್ಗಿಯವರ ಮಹಾಮಾರ್ಗದ ಮಹಾಯಾನವಾಗಿದೆ. ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಸಂಶೋಧಕರಿಗೆ, ವಿಶ್ವವಿದ್ಯಾಲಯಗಳಿಗೆ ಉಪಯುಕ್ತವಾದ, ಪ್ರೇರಣೆ ನೀಡುವ ಸಂಪುಟವಾಗಿವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾಂತೇಶ ಬಿರಾದಾರ, ಕಲಬುರ್ಗಿ ಹಂತಕರು ವಿಜಯಪುರದಲ್ಲೇ ಇದ್ದಾರೆ. ಆದರೆ, ಅವರು ನಿಜವಾದ ಕೊಲೆಗಾರಲ್ಲ, ಕಲಬುರ್ಗಿಯವರ ಬಗ್ಗೆ ಏನೂ ಗೊತ್ತಿಲ್ಲದವರಾಗಿದ್ದಾರೆ. ಕಲಬುರ್ಗಿಯವರ ಬಗ್ಗೆ ಗೊತ್ತಿರುವವರು ಇವರ ಮೂಲಕ ಕೊಲೆ ಮಾಡಿಸಿದರು ಎಂದು ಹೇಳಿದರು.

ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಬರಹದ ಒಂದಿ ಸಾಲನ್ನು ಕಲಬುರ್ಗಿ ಅವರು ಭಾಷಣವೊಂದರಲ್ಲಿ ಉಲ್ಲೇಖಿಸಿದ್ದನ್ನು ಟಿವಿ ವಾಹಿನಿಯೊಂದು ಎಡಬಿಡದೆ ಪ್ರಸಾರ ಮಾಡಿ, ಜನರನ್ನು ಉದ್ರೇಕಿಸಿ,ಕಲಬುರ್ಗಿಯವರ ಹತ್ಯೆಗೆ ಪ್ರೇರಣೆ ನೀಡಿತು ಎಂದು ವಿಷಾದ ವ್ಯಕ್ತಪಡಿಸಿದರು.

ಎಂಬಿಪಿ ಲಿಂಗಾಯತ ಗಟ್ಟಿ ಧ್ವನಿ: ಸಂಸ್ಕೃತಿ, ಸಾಹಿತ್ಯದಿಂದ ರಾಜಕಾರಣಿಗಳು ಬಹುದೂರ. ಆದರೆ ಇದಕ್ಕೆ ಅಪವಾದ ಎಂಬಂತೆ ಸಚಿವ ಎಂ.ಬಿ. ಪಾಟೀಲರು ಹಳಕಟ್ಟಿ ಸಂಶೋಧನಾ ಕೇಂದ್ರದ ಚಟುವಟಿಕೆಗಳಿಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡುವ ಮೂಲಕ ಸಂಸ್ಕೃತಿ, ಸಾಹಿತ್ಯವನ್ನು ಪೋಷಣೆ ಮಾಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಭಾಲ್ಕಿಯ ಬಸವಲಿಂಗ ಪಟ್ಟದೇವರು ಮೆಚ್ಚುಗೆ ವ್ಯಕ್ತಪಡಿಸಿದರು.

ಎಂ.ಬಿ. ಪಾಟೀಲರಲ್ಲಿ ಲಿಂಗಾಯತ ತತ್ವದ ಗಟ್ಟಿತನ ಬರಲು ಅವರು ದಿ.ಕಲಬುರ್ಗಿ ಅವರೊಂದಿಗೆ ಇರಿಸಿದ ಒಡನಾಟವೇ ಕಾರಣ, ರಾಜ್ಯದಲ್ಲಿ ಲಿಂಗಾಯತ ಧರ್ಮದ ಅಸ್ಮಿತೆಯ ಬಗ್ಗೆ ಯಾರೂ ಧ್ವನಿ ಎತ್ತಲಿಲ್ಲ, ರಾಜ್ಯದಲ್ಲಿ ನೂರಾರು ಲಿಂಗಾಯತ ನಾಯಕರಿದ್ದಾರೆ, ಆದರೆ ಒಬ್ಬರು ಈ ಬಗ್ಗೆ ಧ್ವನಿ ಎತ್ತತ್ತಿಲ್ಲ, ಸತ್ಯವನ್ನು ಸತ್ಯ ಎಂದು ಒಪ್ಪಿಕೊಳ್ಳಬೇಕು. ಆದರೆ, ಅನೇಕರು ಮೌನವಾಗಿ ಉಳಿದರು, ಆದರೆ, ಎಂ.ಬಿ. ಪಾಟೀಲರು ಮಾತ್ರ ಈ ಲಿಂಗಾಯತ ಅಸ್ಮಿತೆಯ ಬಗ್ಗೆ ಗಟ್ಟಿಯಾದ ಧ್ವನಿಯಾದರು ಎಂದರು.

ಸಚಿವ ಎಂ.ಬಿ.ಪಾಟೀಲ, ಉಮಾದೇವಿ ಕಲಬುರ್ಗಿ, ಡಾ.ವೀರಣ್ಣ ರಾಜೂರ, ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ.ಎಂ.ಎಸ್.ಮದಭಾವಿ, ಸಂಶೋಧಕಿ ಡಾ. ಹನುಮಾಕ್ಷಿ ಗೋಗಿ, ಡಾ. ಸುಭಾಸ ಕನ್ನೂರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.